ಮೈಸೂರು ದಸರಾ ಬಂದೋಬಸ್ತ್ಗಾಗಿ ಬಂದಿರುವ ಹೊರ ಜಿಲ್ಲೆಗಳ ಪೊಲೀಸರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಿರುವುದು ಕಸಿವಿಸಿ ಮೂಡಿಸುತ್ತದೆ. ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಅವರ ಮೂಲಕ ಈ ವಿಷಯ ಸಾರ್ವಜನಿಕರಿಗೆ ತಿಳಿಯುವಂತಾಗಿದೆ. ಪೊಲೀಸರು ತಮಗೆ ನೀಡಿದ ಆಹಾರವನ್ನು ಸೇವಿಸದೆ ‘ಭೂತಾಯಿಯ’ ಮಡಿಲಿಗೆ ಹಾಕಿದ್ದಾರೆ ಎಂಬ ವಿಷಯವೂ ವರ್ಣರಂಜಿತ ದಸರಾಗೆ ಕಪ್ಪುಚುಕ್ಕೆಯಂತೆ ಅಲ್ಲವೇ? ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಆಹಾರ ಪೂರೈಸುವವರೊಂದಿಗೆ ಮಾತನಾಡಿ ಪೊಲೀಸರಿಗೆ ಗುಣಮಟ್ಟದ ಆಹಾರವನ್ನು ಪೂರೈಸಬೇಕಾಗಿದೆ.
ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





