Mysore
34
few clouds

Social Media

ಬುಧವಾರ, 29 ಏಪ್ರಿಲ 2026
Light
Dark

ಓದುಗರ ಪತ್ರ: ಮಕ್ಕಳಲ್ಲಿ ಸ್ವಯಂ ಪ್ರೇರಿತ ಓದು ಅವಶ್ಯ

ಓದುಗರ ಪತ್ರ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಅದಕ್ಕೆ ಪೂರಕವಾಗಿ ಸಂಜೆ ೭ರಿಂದ ರಾತ್ರಿ ೯ ರವರೆಗೆ ಎಲ್ಲ ಮನೆಗಳಲ್ಲೂ ಟಿವಿ ಮತ್ತು ಮೊಬೈಲ್ ಆಫ್ ಮಾಡಲು ಗ್ರಾಮಗಳಲ್ಲಿ ಡಂಗುರ ಸಾರಲು ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ಗದಗ ಡಿಡಿಪಿಐ ಅವರು ಆದೇಶ ಹೊರಡಿಸಿರುವುದು ಸ್ವಾಗತಾರ್ಹ.

ಮಕ್ಕಳ ಓದಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ. ಟಿವಿ ಹಾಗೂ ಸ್ಮಾರ್ಟ್ ಫೋನ್ ವೀಕ್ಷಣೆಗೆ ಮಿತಿ ಹೇರುವುದು ಅವಶ್ಯ. ಮಕ್ಕಳಿಗೆ ಓದು ಎಂಬುದು ಬಲವಂತದ ಪ್ರಕ್ರಿಯೆ ಆಗಬಾರದು. ಬದಲಾಗಿ ಪಠ್ಯಪುಸ್ತಕಗಳನ್ನು ಸ್ವಯಂ ಪ್ರೇರಣೆಯಿಂದ ಓದಿ ಖುಷಿಪಡುವ ಅಭ್ಯಾಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ರೂಢಿಸಿಕೊಂಡು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವುದು ಅವಶ್ಯ.

 -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

 

Tags:
error: Content is protected !!