Mysore
25
heavy intensity rain

Social Media

ಶುಕ್ರವಾರ, 29 ಮೇ 2026
Light
Dark

ಓದುಗರ ಪತ್ರ: ಗ್ರಂಥಾಲಯ ಪುನರಾರಂಭಿಸಿ

dgp murder case

ಮೈಸೂರಿನ ಕುವೆಂಪು ನಗರದ, ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ಉದ್ಯಾನವನದ, ಕುವೆಂಪು ಪುತ್ತಳಿಯ ಕೆಳಭಾಗದಲ್ಲಿ, ಸುಮಾರು ಹತ್ತು ವರ್ಷಗಳ ಹಿಂದೆ, ಅಂದಿನ ನಗರ ಪಾಲಿಕೆಯ ಸದಸ್ಯರಾಗಿದ್ದ ಕೆ.ವಿ.ಮಲ್ಲೇಶ್ ರವರ ಪ್ರಾಮಾಣಿಕ ಪ್ರಯತ್ನದಿಂದಾಗಿ ಕುವೆಂಪು ಪುತ್ತಳಿಯನ್ನು ಅನಾವರಣ ಮಾಡುವ ಸಂದರ್ಭ ದಲ್ಲೇ ಇದರ ಕೆಳಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕ ಗ್ರಂಥಾಲಯವನ್ನು ತೆರೆಯಲಾಗಿತ್ತು, ವಿದ್ಯಾರ್ಥಿಗಳು, ಹಾಗೂ ಹಿರಿಯ ನಾಗರಿಕರು ಸೇರಿದಂತೆ ನೂರಾರು ಜನರು ಇದರ ಉಪಯೋಗ ಪಡೆಯುತ್ತಿದ್ದರು. ಕರೋನ ಮಹಾಮಾರಿಯ ನಂತರ ಅಂದರೆ ಕಳೆದ ಐದು ವರ್ಷಗಳಿಂದ ಈ ಗ್ರಂಥಾಲಯವನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ, ಕೇಂದ್ರ ಗ್ರಂಥಾಲಯದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಈ ಗ್ರಂಥಾಲಯವನ್ನು, ಪುನಃ ತೆರೆದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

 -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

Tags:
error: Content is protected !!