ಮೈಸೂರಿನ ಸರಸ್ವತಿಪುರಂನ 8ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆಯಲ್ಲಿ ಮರದ ಕೊಂಬೆ ಬಿದ್ದು, ಬೀದಿ ದೀಪದ ಕಂಬ ಹಾಳಾಗಿದ್ದು, ಒಂದು ವರ್ಷ ಕಳೆದರೂ ದುರಸ್ತಿ ಮಾಡದೇ ಇರುವುದರಿಂದ ಇಲ್ಲಿನ ಜನರು ರಾತ್ರಿಯ ವೇಳೆ ಬೀದಿ ದೀಪವಿಲ್ಲದೇ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ.
ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೆ ಬೀದಿ ದೀಪದ ಬ್ರಾಕೆಟ್ ಮುರಿದು ಹೋಗಿರುವುದರಿಂದ ಅದನ್ನು ಚಾಮುಂಡೇಶ್ವರಿ ವಿದ್ಯುತ್ ನಿಗಮ(ಸೆಸ್ಕ್)ದವರೇ ಅಳವಡಿಸಬೇಕು ಎಂದು ಹೇಳುತ್ತಾರೆ. ಇತ್ತ ಸೆಸ್ಕ್‌ನವರಿಗೆ ಹಲವಾರು ಬಾರಿ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಬಡಾವಣೆಯ ಜನರಿಗೆ ರಾತ್ರಿ ವೇಳೆ ಸಂಚರಿಸಲು ತೀವ್ರ ತೊಂದರೆಯಾಗಿದೆ. ಸೆಸ್ಕ್‌ನವರು ಕೂಡಲೇ ಬೀದಿ ದೀಪವನ್ನು ದುರಸ್ತಿ ಮಾಡುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
– ಕೆ.ವಿ.ಶ್ರೀನಿವಾಸ್, ಸರಸ್ವತಿ ಪುರಂ, ಮೈಸೂರು





