ನಂಜನಗೂಡು -ಊಟಿ ರಸ್ತೆಯ ಕಡುಬಿನ ಕಟ್ಟೆಯಿಂದ ಮುದ್ದಹಳ್ಳಿ -ನವಿಲೂರು ನಡುವಿನ ೫ ಕಿ.ಮೀ. ರಸ್ತೆ ದೊಡ್ಡ ಹಳ್ಳಕೊಳ್ಳಗಳಿಂದ ಕೂಡಿದ್ದು ಬಸ್ಸು, ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇದರಿಂದಾಗಿ ವಾಹನ ಸವಾರರು ಹಳ್ಳ ಕೊಳ್ಳಗಳನ್ನು ತಪ್ಪಿಸಲು ಎಡ ಭಾಗದಲ್ಲಿ ಹೋಗುವವರು ಬಲ ಭಾಗದಲ್ಲಿ ಹಾಗೂ ಡಾಂಬರು ರಸ್ತೆಯನ್ನೇ ಬಿಟ್ಟು ಪಕ್ಕದ ಮಣ್ಣಿನ ರಸ್ತೆಗೆ ಇಳಿಯುತ್ತಾರೆ, ಇದರಿಂದ ಅಪಘಾತಗಳಾಗುವ ಸಂಭವ ಇದೆ. ವೃದ್ಧರು, ಗರ್ಭಿಣಿಯರು ಬಸ್ಸಿನಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಅಧಿಕಾರಿಗಳು, ಅಧ್ಯಕ್ಷರು, ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸಿ ಕೂಡಲೇ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ.
– ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





