Mysore
18
overcast clouds

Social Media

ಮಂಗಳವಾರ, 06 ಜನವರಿ 2026
Light
Dark

ಓದುಗರ ಪತ್ರ: ಮ್ಯಾನ್‌ಹೋಲ್ ದುರಸ್ತಿಪಡಿಸಿ

ಮೈಸೂರಿನ ವಿಜಯನಗರದಲ್ಲಿರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಸಮೀಪದ ಕನ್ನಡ ಸಾಹಿತ್ಯ ಪರಿಷತ್ ಭವನದ ರಸ್ತೆಯ ಬಳಿ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಹೊರ ಬರುತ್ತಿದ್ದು, ದುರ್ವಾಸನೆ ಬೀರಲಾರಂಭಿಸಿದೆ. ಐದು- ಆರು ದಿನಗಳಿಂದ ಈ ಮ್ಯಾನ್‌ಹೋಲ್ ಮೂಲಕ ಕೊಳಚೆ ನೀರು ರಸ್ತೆಗೆ ಹರಿ ಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು, ರಸ್ತೆಯಲ್ಲಿ ತಿರು ಗಾಡುವ ಸಾರ್ವಜನಿಕರು ಈ ನೀರನ್ನು ತುಳಿದು ಕೊಂಡೇ ದುರ್ವಾಸನೆ ತಾಳಲಾರದೆ ಮೂಗು ಮುಚ್ಚಿ ಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಮುಂಜಾನೆ ಈ ಮ್ಯಾನ್ ಹೋಲ್‌ನಿಂದ ಚರಂಡಿ ನೀರು ಮೇಲೆ ಉಕ್ಕುತ್ತಿದೆ. ಅಲ್ಲದೆ ಈ ನೀರಿನ ಮೇಲೆ ವಾಹನಗಳು ಸಂಚರಿಸುತ್ತಿದ್ದಂತೆಲ್ಲಾ ಆ ನೀರು ಅಕ್ಕ ಪಕ್ಕಕ್ಕೆ ಆರುತ್ತಿದೆ. ಇದರಿಂದಾಗಿ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಇಂತಹ ಅನೈರ್ಮಲ್ಯದ ವಾತಾವರಣದಿಂದಾಗಿ ರೋಗಗಳು ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಮೈಸೂರು ಮಹಾ ನಗರ ಪಾಲಿಕೆಯವರು ಈ ಬಗ್ಗೆ ಗಮನಹರಿಸಿ ಈ ಮ್ಯಾನ್‌ಹೋಲ್‌ಅನ್ನು ಸರಿಪಡಿ ಸುವ ಮೂಲಕ ಕೊಳಚೆ ನೀರು ರಸ್ತೆಗೆ ಹರಿಯದಂತೆ ನೋಡಿ ಕೊಳ್ಳಬೇಕಿದೆ.

-ಆರ್.ಯಶಸ್, ಮೈಸೂರು.

 

Tags:
error: Content is protected !!