Mysore
21
scattered clouds
Light
Dark

ಓದುಗರ ಪತ್ರ| ಅಣೆಕಟ್ಟೆಗಳ ದುರಸ್ತಿ ಅಗತ್ಯ

ರಾಜ್ಯದ ಅಣೆಕಟ್ಟೆಗಳ ಪೈಕಿ ಬಹುತೇಕ ಅಣೆಕಟ್ಟೆಗಳು ನಿರ್ಮಾ ಣಗೊಂಡು 50 ವರ್ಷಗಳ ಮೇಲಾಗಿದ್ದು, ನೂರು ವರ್ಷಗಳನ್ನು ಪೂರೈಸಿರುವ ಅಣೆಕಟ್ಟೆಗಳೂ ಇರುವುದರಿಂದ ಅವು ಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸುವುದು ಅಗತ್ಯ. ತುಂಗಭದ್ರ ಜಲಾಶಯವನ್ನು 1953ರಲ್ಲಿ ನಿರ್ಮಿಸಲಾಗಿದೆ. ಈ ಜಲಾಶಯದ ಒಂದು ಕ್ರಸ್ಟ್ ಗೇಟ್ ಇತ್ತೀಚೆಗೆ ಮುರಿದುಬಿದ್ದು ಆತಂಕ ಸೃಷ್ಟಿಸಿತ್ತು. ಅದೇ ರೀತಿ ಕೆಆರ್‌ಎಸ್ ಜಲಾಶಯವು ನಿರ್ಮಾಣವಾಗಿ ಈಗಾಗಲೇ ನೂರು ವರ್ಷಗಳನ್ನು ಪೂರೈಸಿದೆ. ವೇದಾವತಿನದಿಗೆವಾಣಿವಿಲಾಸಸಾಗರಜಲಾಶಯನಿರ್ಮಾಣವಾಗಿಯೂ 125 ವರ್ಷಗಳಾಗಿವೆ. ಇನ್ನು ಕಬಿನಿ, ನುಗು, ಹಾರಂಗಿ ಜಲಾಶಯಗಳಿಗೂ ಏನಿಲ್ಲ ಎಂದರೂ 50 ವರ್ಷಗಳಾಗಿವೆ.

ರಾಜ್ಯ ಸರ್ಕಾರವು ಈ ಜಲಾಶಯಗಳನ್ನು ಕಾಲಕಾಲಕ್ಕೆ ದುರಸ್ತಿಗೊಳಿಸಿ ಸರಿಯಾಗಿ ನಿರ್ವಹಿಸಬೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಅನಿಸುತ್ತದೆ. ಸದ್ಯ ತುಂಗಭದ್ರ ಜಲಾಶಯದ ಗೇಟ್ ಮುರಿದುಬಿದ್ದಿರುವುದುಹಾಗೂಕಬಿನಿಜಲಾಶಯವುಸೋರುತ್ತಿರುವುದು ಎಚ್ಚರಿಕೆಯ ಘಂಟೆಯಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಜಲಾಶಯಗಳನ್ನು ದುರಸ್ತಿಗೊಳಿಸಬೇಕಿದೆ.

-ಎನ್.ಆರ್.ಚೇತನ್, ನಗರ್ಲೆ, ನಂಜನಗೂಡು.