ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲಾ ವಯೋಮಾನದ ಮಹಿಳೆಯರೂ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.ಈ ಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದಾರೆ. ಆದರೆ ಕೆಲ ಬಸ್ಸುಗಳು ಹಳೆಯ ಮಾದರಿಯಲ್ಲೇ ಇವೆ. ಮೆಟ್ಟಿಲುಗಳು ಅತಿ ಎತ್ತರದಲ್ಲಿ ಇರುತ್ತವೆ. ಇದರಿಂದ ವಯಸ್ಸಾದವರು, ಗರ್ಭಿಣಿಯರು, ವಿಶೇಷ ಚೇತನರು, ಅನಾರೋಗ್ಯ ಪೀಡಿತರಿಗೆ ಅನನುಕೂಲವಾಗುತ್ತಿದೆ. ಬಸ್ ಹತ್ತುವುದಕ್ಕೂ ಇಳಿಯುವುದಕ್ಕೂ ಕಷ್ಟವಾಗುತ್ತಿದೆ. ಇಳಿಯುವುದು ತಡವಾದರೆ ಸಹಜವಾಗಿಯೇ ಕಂಡಕ್ಟರ್ ಸಿಟ್ಟಾಗುತ್ತಾರೆ. ಪ್ರಯಾಣಿಕರು ಇಳಿಯುವ ಬರದಲ್ಲಿ ಕೆಳಗೆ ಬಿದ್ದ ಉದಾಹರಣೆಗಳೂ ಇವೆ. ಆದ್ದರಿಂದ ಹಳೆಯ ಬಸ್ಸುಗಳ ಮೆಟ್ಟಿಲುಗಳನ್ನು ಕೆಳಮಟ್ಟಿಗೆ ಇಳಿಸಿದರೆ ಎಲ್ಲರಿಗೂ ಉಪಯೋಗವಾಗುತ್ತದೆ. ಅನಾಹುತಗಳು ತಪ್ಪಿದಂತಾಗುತ್ತದೆ.
– ಎಂ.ಎಸ್.ಉಷಾ ಪ್ರಕಾಶ್, ಮೈಸೂರು.





