Mysore
28
light rain

Social Media

ಶುಕ್ರವಾರ, 16 ಅಕ್ಟೋಬರ್ 2026
Light
Dark

ಓದುಗರ ಪತ್ರ: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಎಐ ಅವಲಂಬನೆ ಪರಿಹಾರವಲ್ಲ

ದೇಶದಲ್ಲಿ ನೀಟ್ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಯನ್ನು ತಡೆಯಲು, ಪರೀಕ್ಷೆ ದಿನದಂದೇ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಬೇಕು ಹಾಗೂ ಕಂಪ್ಯೂಟರ್ ಬೇಸ್ಡ್ ಪರೀಕ್ಷೆ ನಡೆಸಬೇಕು ಎಂದು ಪರೀಕ್ಷಾ ಸುಧಾರಣೆಗಳ ಉನ್ನತ ಮಟ್ಟದ ಕಾರ್ಯಪಡೆಯ ಮುಖ್ಯಸ್ಥ ನಂದನ್ ನಿಲೇಕಣಿ ಅವರು ಸಲಹೆ ನೀಡಿದ್ದಾರೆ.  ಇದು ಪ್ರಶ್ನೆ ಪತ್ರಿಕೆ ಸೋರಿಕೆಗೆ ಪರಿಹಾರವಲ್ಲ. ಎಐ ವ್ಯವಸ್ಥೆಗಳು ಗಣಿತದ ಮತ್ತು ಸಾಂಖ್ಯಿಕ ಪರಿಕರಗಳಾಗಿವೆಯೇ ಹೊರತು, ಅವು ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಪ್ರಜ್ಞಾಪೂರ್ವಕ ಪ್ರತಿನಿಧಿಯಲ್ಲ. ದೇಶದಲ್ಲಿ ಸದ್ಯ, ಸುಮಾರು ೧.೫ ಲಕ್ಷ ಕಂಪ್ಯೂಟರ್ ಪರೀಕ್ಷಾ ಕೇಂದ್ರಗಳ ಲಭ್ಯತೆಯಿದ್ದು, ಇಡೀ ದೇಶದ ಕೋಟ್ಯಂತರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಈ ಜಾಲವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಬೇಕಾಗಿದೆ. ಇದಕ್ಕೆ ಸರ್ಕಾರಕ್ಕೆ ಮಿಲಿಯನ್ ಗಟ್ಟಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ. ತಾಂತ್ರಿಕತೆಯ ಬಗ್ಗೆ ಅಷ್ಟಾಗಿ ಅರಿವು ಇರದ ಗ್ರಾಮೀಣ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ದೋಷಗಳು ಎದುರಾದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತದೆ.

ನಂದನ್ ನಿಲೇಕಣಿ ಅವರ ಈ ತಂತ್ರಜ್ಞಾನ ಆಧಾರಿತ ನಿಯಮವು ಭ್ರಷ್ಟಾಚಾರ ಮತ್ತು ಪೇಪರ್ ಸೋರಿಕೆಯನ್ನು ತಡೆಯಲು ಮೇಲುನೋಟಕ್ಕೆ ಕೆಲವೊಂದು ವಿಭಿನ್ನ ಅಂಶಗಳು ಸರಿ ಅನ್ನಿಸಿದರೂ ಆದರೆ, ಇದನ್ನು ಯಶಸ್ವಿಯಾಗಿ ಜಾರಿಗೆ ತರಬೇಕಾದರೆ ದೇಶದಾದ್ಯಂತ ಸುರಕ್ಷಿತವಾದ ಸೈಬರ್ ಭದ್ರತೆ ಮತ್ತು ಬಲಿಷ್ಠ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿದೆ. ಸರ್ವ ಸಮಸ್ಯೆಗಳಿಗೂ ಕೃತಕ ಬುದ್ಧಿಮತ್ತೆಯೇ ಪರಿಹಾರವಲ್ಲ.

 -ಅನಿಲ್ ಕುಮಾರ್, ನಂಜನಗೂಡು

Tags:
error: Content is protected !!