Mysore
23
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಓದುಗರ ಪತ್ರ: ಇಂಧನದ ಮೇಲಿನ ತೆರಿಗೆ ಇಳಿಸಿ

ಓದುಗರ ಪತ್ರ

ಅಮೆರಿಕ -ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇರಾನ್ ಹಾರ್ಮುಜ್ ಜಲಸಂಽಯನ್ನು ಮುಚ್ಚಿದ್ದರಿಂದಾಗಿ ಕಚ್ಚಾತೈಲದ ಆಮದು ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದರಿಂದಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಆಟೋ ಎಲ್‌ಪಿಜಿ ಗ್ಯಾಸ್ ದರಗಳನ್ನು ಮೂರು ಬಾರಿ ಏರಿಕೆ ಮಾಡಿದೆ.

ಪೆಟ್ರೋಲ್ ಮೇಲೆ ರಾಜ್ಯದಲ್ಲಿ ೨೯.೮೪ ರೂ. ಡೀಸೆಲ್ ಮೇಲೆ ೨೧.೧೭ ರೂ. ಗೃಹ ಬಳಕೆ ಅಡುಗೆ ಅನಿಲದ ಮೇಲೆ ಪ್ರತಿ ಸಿಲಿಂಡರ್‌ಗೆ ೪೩.೩೬ ರೂ. ಜಿಎಸ್‌ಟಿ ವಿಧಿಸುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ತೆರಿಗೆಯೂ ಸೇರಿರುವುದರಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ ೧೧೧ರೂ., ಡೀಸೆಲ್ ೧೦೦ ರೂ. ಗಳಾಗಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ ೯೫೦ ರೂ. ಆಗಿದ್ದು, ಸರಕು ಸಾಗಣೆ ದರ ಹೆಚ್ಚಾಗಿರುವುದರಿಂದ ಬಡ ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದೇ ದುಸ್ತರವಾಗಿದೆ.

ಇಂಧನ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ಮಾಡುತ್ತಿವೆಯೇ ಹೊರತು ಇಂಧನದ ಮೇಲಿನ ತೆರಿಯನ್ನು ಕಡಿತಗೊಳಿಸುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆಯನ್ನು ಕಡಿತ ಮಾಡಿ ಪ್ರಜೆಗಳ ಹಿತ ಕಾಪಾಡುವುದು ಅಗತ್ಯ.

– ಗುರು, ಕಾರ್ಯ, ನಂಜನಗೂಡು ತಾ.

 

 

Tags:
error: Content is protected !!