ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ ೨೫ ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದೆ.
ಇದರಿಂದಾಗಿ ಮತ್ತಷ್ಟು ಸಂಖ್ಯೆಯ ನೌಕರರು ಈ ಕಾಯ್ದೆಯಡಿ ಶಾಸನಬದ್ಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ನೌಕರರ ವೇತನ ಮಿತಿಯನ್ನು ೨೦೧೪ ರಲ್ಲಿ ೧೫ ಸಾವಿರ ರೂಪಾಯಿಗಳಿಗೆ ಏರಿಸಲಾಗಿತ್ತು. ಇದೀಗ ಆ ಮಿತಿಯನ್ನು ೨೫ ಸಾವಿರ ರೂ.ಗಳಿಗೆ ಏರಿಸುವ ನಿರ್ಧಾರ ಕಾರ್ಮಿಕ ಸ್ನೇಹಿಯಾಗಿರುವುದಲ್ಲದೇ, ಭವಿಷ್ಯ ನಿಧಿ ಯೋಜನೆಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
-ಕೆ.ವಿ.ವಾಸು, ಮೈಸೂರು




