Mysore
18
overcast clouds

Social Media

ಬುಧವಾರ, 28 ಜನವರಿ 2026
Light
Dark

ಓದುಗರ ಪತ್ರ:  ಚಾ.ನಗರ-ಮೈಸೂರು ನಡುವೆ ಹೆಚ್ಚಿನ ರೈಲು ಸೌಲಭ್ಯ ಕಲ್ಪಿಸಿ

ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ , ೯.೫೦ಕ್ಕೆ, ಮಧ್ಯಾಹ್ನ ೧.೫೦ಕ್ಕೆ, ಸಂಜೆ ೫ಕ್ಕೆ ರೈಲು ಸಂಚಾರ ಆರಂಭಿಸಿದರೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹಾಗೂ ಕಾರ್ಖಾನೆಗೆ ತೆರಳುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ.

ಮೈಸೂರಿನಿಂದ ಚಾಮರಾಜನಗರಕ್ಕೆ ಬೆಳಿಗ್ಗೆ ೮.೩೦, ಮಧ್ಯಾಹ್ನ ೧೨ ಮತ್ತು ೨ ಗಂಟೆಗೆ, ರಾತ್ರಿ ೭ಕ್ಕೆ ಹಾಗೂ ರಾತ್ರಿ ೯.೩೦ಕ್ಕೆ ರೈಲು ಸಂಚರಿಸಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ. ಕೊಡಗು -ಮೈಸೂರು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮತ್ತು ಚಾಮರಾಜನಗರ ಸಂಸದ ಸುನಿಲ್ ಬೋಸ್ ರವರು ಈ ಬಗ್ಗೆ ಗಮನ ಹರಿಸಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ನವರ ಗಮನಕ್ಕೆ ತಂದು ಶೀಘ್ರವಾಗಿ ಮೈಸೂರಿನಿಂದ ಚಾಮರಾಜನಗಕ್ಕೆ ಹಾಗೂ ಚಾ.ನಗರದಿಂದ ಮೈಸೂರಿಗೆ ಹೆಚ್ಚಿನ ರೈಲು ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕಾಗಿದೆ.

– ಅಹಲ್ಯ ಸಿ.ನಾ. ಚಂದ್ರ, ಜನತಾ ನಗರ, ಮೈಸೂರು

Tags:
error: Content is protected !!