Mysore
24
overcast clouds

Social Media

ಮಂಗಳವಾರ, 20 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮಸ್ಕಿಯ ಶಿಲಾಶಾಸನ ಸ್ಥಳದಲ್ಲಿ ಮೂಲಸೌಲಭ್ಯ ಕಲ್ಪಿಸಿ

ಓದುಗರ ಪತ್ರ

ರಾಯಚೂರು ಜಿಯ ಐತಿಹಾಸಿಕ ಪಟ್ಟಣ ಎಂದೇ ಗುರುತಿಸಿಕೊಂಡಿರುವ ಮಸ್ಕಿಯ ಶಿಲಾಶಾಸನ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಶೋಕನ ಹಿಂದಿನ ಶಾಸನಗಳಲ್ಲಿ ಅವನನ್ನು ಕೇವಲ ‘ದೇವನಾಂಪ್ರಿಯ’ ಅಥವಾ ‘ದೇವನಾಂಪ್ರಿಯ ಪಿಯದಸಿ’ ಎಂದು ಮಾತ್ರ ಕರೆಯಲಾಗಿತ್ತು. ಆದರೆ ಮಸ್ಕಿ ಶಾಸನದಲ್ಲಿ ಮೊದಲ ಬಾರಿಗೆ ದೇವನಾಂಪ್ರಿಯ ಅಶೋಕ ಎಂದು ಸ್ಪಷ್ಟವಾಗಿ ಉಖಿಸಲಾಗಿದೆ. ಇದರ ಮೂಲಕ ದೇಶದ ಇತರೆಡೆ ಸಿಕ್ಕಿದ ಶಾಸನಗಳು ಅಶೋಕನದ್ದೇ ಎಂದು ಖಚಿತಪಡಿಸಿ ಕೊಳ್ಳಲಾಗಿರುವ, ಇಂತಹ ಪ್ರೇಕ್ಷಣೀಯ ಸ್ಥಳಕ್ಕೆ ದೇಶ- ವಿದೇಶಗಳಿಂದ ವಿದ್ಯಾರ್ಥಿಗಳು, ಸಂಶೋಧಕರು ಪ್ರವಾಸಿಗರು ಬರುತ್ತಾರೆ.

ವಿಪರ್ಯಾಸವೆಂದರೆ, ಈ ಸ್ಥಳದಲ್ಲಿ ಕಂಡು ಬರುವ ಮೂಲಭೂತ ಸೌಕರ್ಯಗಳ ಕೊರತೆ ನಿಜಕ್ಕೂ ಬೇಸರದ ಸಂಗತಿ. ಈ ಸ್ಥಳವು ನಿರ್ಜನ ಪ್ರದೇಶವಾಗಿರುವುದರಿಂದ ಪ್ರವಾಸಿಗರ ಭದ್ರತೆ ದೃಷ್ಟಿಯಿಂದ ಪೊಲೀಸರನ್ನು ನಿಯೋಜನೆ ಮಾಡುವುದು ಒಳಿತು. ಹಾಗೆಯೇ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಹಾಗೂ ಮಳೆ ಬಂದರೆ ನಿಲ್ಲುವುದಕ್ಕೆ ಒಂದು ತಂಗುದಾಣ, ಜೊತೆಗೆ ಬಸ್ ನಿಲ್ದಾಣ ನಿರ್ಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸರ್ಕಾರದ ಕಣ್ಣುತೆರೆಸಿ ಕನಿಷ್ಠ ಸೌಲಭ್ಯ ಮಾಡಿಕೊಡುವತ್ತ ಗಮನಹರಿಸಬೇಕಾಗಿದೆ.

-ನಾಗೇಶ್ ಮಾನಸಗಂಗೋತ್ರಿ, ಮೈಸೂರು

Tags:
error: Content is protected !!