Mysore
27
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಸೌಲಭ್ಯ ಕಲ್ಪಿಸಿ

ಓದುಗರ ಪತ್ರ

ಪತ್ರಿಕಾ ವಿತರಕರು ಅಕ್ಷರಶಃ ಸಮಾಜದ ಅದೃಶ್ಯ ಕಾಯಕಯೋಗಿಗಳು. ಮಳೆ, ಗಾಳಿ, ಚಳಿ ಎನ್ನದೆ ಜ್ಞಾನದೀವಿಗೆ ಹಂಚುವ ಇವರ ಬದುಕು ಇಂದಿಗೂ ಆರ್ಥಿಕ ಅನಿಶ್ಚಿತತೆಯಲ್ಲಿದೆ. ಸುಮಾರು ೨೦ ಕಿ.ಮೀ. ಸೈಕಲ್ ತುಳಿಯುವ ಇವರಿಗೆ ಕನಿಷ್ಠ ಆರೋಗ್ಯ ವಿಮೆಯೂ ಇಲ್ಲದಿರುವುದು ವಿಷಾದನೀಯ. ಅತ್ಯಲ್ಪ ಮಾಸಿಕ ಆದಾಯದಲ್ಲಿ ಸಂಸಾರ ನಿಭಾಯಿಸುವ ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಈ ಹಿನ್ನೆಲೆಯಲ್ಲಿ ಸರ್ಕಾರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು, ಈ ನಿಧಿಯು ಅವರ ಮಕ್ಕಳ ಶಿಕ್ಷಣ ಮತ್ತು ತುರ್ತು ಚಿಕಿತ್ಸೆಗೆ ಆಸರೆಯಾಗಬೇಕು ರಾಜ್ಯ ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಈ ಶ್ರಮಜೀವಿಗಳಿಗೆ ಭದ್ರತೆ ನೀಡುವುದು ಅಗತ್ಯ .

-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು

Tags:
error: Content is protected !!