ಸುಪ್ರೀಂ ಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಬೂಟು ಎಸೆದಿರುವುದು ಅಕ್ಷಮ್ಯ ಅಪರಾಧ. ಇದು ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ, ಪ್ರಜಾಪ್ರಭುತ್ವ, ಸಂವಿಧಾನದ ಆತ್ಮವಾದ ಕಾನೂನು ಮತ್ತು ನ್ಯಾಯಾಂಗದ ಗೌರವವನ್ನು ಹಾಳುಮಾಡುವ ಕೃತ್ಯವಾಗಿದೆ.
ನ್ಯಾಯಾಧೀಶರು ನ್ಯಾಯಾಂಗದ ಆಧಾರ ಸ್ತಂಭವಾಗಿದ್ದಾರೆ. ಅಂತಹವರ ಮೇಲೆ ಹೇಯ ಕೃತ್ಯವನ್ನು ಎಸಗಿ ಸಮಾಜದ ಶಾಂತಿಯನ್ನು ಕೆದಡಲು ಕಾರಣವಾಗಿರುವ ವಕೀಲನನ್ನು ತೀವ್ರ ವಿಚಾರಣೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.
-ಅನಿಲ್ ಕುಮಾರ್, ನಂಜನಗೂಡು





