ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಜೆ. ಸಿ. ಲೇಔಟ್‌ನ ೮ನೇ ಕ್ರಾಸ್ ಬಳಿ ರಾಜಕಾಲುವೆ ಇದೆ. ಇದಕ್ಕೆ ಸಮೀಪದಲ್ಲಿ ಇರುವ ಕೆ. ಸಿ. ಲೇಔಟ್ ಕಡೆಯಿಂದ ಹರಿದುಬರುವ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು, ದುರ್ನಾತ ಬೀರುತ್ತಿದೆ. ಹಾಗಾಗಿ ರಾಜಕಾಲುವೆ ಆಸುಪಾಸಿನಲ್ಲಿ ವಾಸಿಸುತ್ತಿರುವ ನಿವಾಸಿಗಳು ಇದರಿಂದ ಪರದಾಡುವಂತೆ ಆಗಿದೆ. ಅಲ್ಲದೆ, ಕೊಳಚೆಯಿಂದಾಗಿ ಈ ಜಾಗವು ಸೊಳ್ಳೆಗಳ ಆವಾಸ್ಥಾನವಾಗಿಬಿಟ್ಟಿದೆ. ಇದರಿಂದ ಸ್ಥಳೀಯರು ರೋಗ-ರುಜಿನಗಳು ಹರಡುವ ಭೀತಿಯಲ್ಲಿ ದಿನದೂಡುವಂತಾಗಿದೆ. ಈ ಸಮಸ್ಯೆಯನ್ನು ಜನಪ್ರತಿನಿಽಗಳು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ರಾಜಕಾಲುವೆಗೆ ಸೇರುತ್ತಿರುವ ಕೊಳಚೆ ನೀರನ್ನು ಬೇರೆ ಕಡೆಗೆ ಹರಿಯುವಂತೆ ಮಾಡಲು ಕ್ರಮವಹಿಸುವ ಮೂಲಕ ಸ್ಥಳೀಯರು ನೆಮ್ಮದಿಯಾಗಿರಲು ಅವಕಾಶ ಕಲ್ಪಿಸಿಕೊಡಬೇಕು.
-ಕಾಂತರಾಜು, ಜೆ. ಸಿ. ಲೇಔಟ್, ಮೈಸೂರು





