ಕರ್ನಾಟಕದ ತೋತಾಪುರಿ ಮಾವು ಖರೀದಿಸದಂತೆ ಆಂಧ್ರಪ್ರದೇಶ ಸರ್ಕಾರ ನಿಷೇಧ ಹೇರಿದೆ.ಎರಡೂ ರಾಜ್ಯಗಳ ಗಡಿಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಪೊಲೀಸರು, ಅರಣ್ಯ ಅಧಿಕಾರಿಗಳು, ಕೃಷಿ ಮಾರುಕಟ್ಟೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳನ್ನು ನಿಯೋಜಿಸಿದೆ.ಕರ್ನಾಟಕದ ಮಾವು ಮಾರುಕಟ್ಟೆಗೆ ಬಂದರೆ, ಆಂಧ್ರ ಪ್ರದೇಶದ ರೈತರು ಬೆಳೆದ ಮಾವಿಗೆ ಬೆಲೆ ಕಡಿಮೆಯಾಗುತ್ತದೆ ಎನ್ನುವ ಕಾರಣ ನೀಡಿ ಕರ್ನಾಟಕದ ರೈತರು ಬೆಳೆದ ಮಾವು ಉತ್ಪನ್ನವನ್ನು ನಿರ್ಬಂಧಿಸಿದೆ.
ಈ ನಿರ್ಬಂಧವನ್ನು ತೆರೆವುಗೊಳಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದರೂ ಅದನ್ನು ಪರಿಗಣಿಸಿಲ್ಲ. ಇದು ನಿಜಕ್ಕೂ ಖಂಡನಾರ್ಹ. ಯಾವುದೇ ಉತ್ಪನ್ನಗಳನ್ನು ದೇಶದ ಎಲ್ಲಿ ಬೇಕಾದರೂ ಮಾರಾಟ ಮಾಡಲು ರೈತರಿಗೆ ಸ್ವಾತಂತ್ರ್ಯವಿದೆ.ಹೀಗಿರುವಾಗ ಆಂಧ್ರದ ನಿರ್ಬಂಧ ಕರ್ನಾಟಕದ ರೈತರಿಗೆ ಮಾರಕವಾಗಿದೆ. ಕೂಡಲೇ ನಿರ್ಬಂಧ ಹಿಂಪಡೆಯಬೇಕು. ಇಲ್ಲದಿದ್ದರೆ ಕರ್ನಾಟಕ ಕೂಡ ಆಂಧ್ರದ ಉತ್ಪನ್ನಗಳ ವಿರುದ್ಧ ಇದೇ ನೀತಿಯನ್ನು ಜಾರಿ ಮಾಡಬೇಕು. ಸುಪ್ರೀಂಕೋರ್ಟ್ ಆದೇಶ, ನ್ಯಾಯ ಮಂಡಳಿ, ಕಾವೇರಿ ಉಸ್ತುವಾರಿ ಸಮಿತಿಯ ಆದೇಶ ಪಾಲನೆ ಮಾಡದಿದ್ದರೆ ಒಕ್ಕೂಟ ವ್ಯವಸ್ಥೆಗೆ ಮಾರಕ ಎನ್ನುವವರಿಗೆ ಇಂತಹ ನಿರ್ಬಂಧಗಳು ಮಾರಕ ಅನಿಸುವುದಿಲ್ಲವೇ? ಕರ್ನಾಟಕ ಕೂಡ ತನ್ನ ನಿಲುವುಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.
-ಮುಳ್ಳೂರು ಪ್ರಕಾಶ್,ಕನಕದಾಸನಗರ, ಮೈಸೂರು





