Mysore
27
light rain

Social Media

ಗುರುವಾರ, 22 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮೊಬೈಲ್ ‘ಕಿರಿಕಿರಿ’ ಜಾಗೃತಿ ಅಗತ್ಯ

ಸಹಪ್ರಯಾಣಿಕರ ಹಿತಾಸಕ್ತಿ ಕಾಪಾಡಲು ಭಾರತೀಯ ರೈಲ್ವೆ ಮೊಬೈಲ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವುದರ ವಿರುದ್ಧ ಕಠಿಣ ನಿಯಮ ಜಾರಿಗೊಳಿಸಿರುವುದು ಸ್ವಾಗತಾರ್ಹ.

ಕಾಯ್ದೆಯ ಅಡಿಯಲ್ಲಿ ಐದು ಸಾವಿರ ರೂ. ದಂಡ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ್ದರೂ, ಶೇ. ೮೦ರಷ್ಟು ಪ್ರಯಾಣಿಕರಿಗೆ ಇಂತಹ ನಿಯಮಗಳ ಅರಿವಿಲ್ಲದಿರುವುದು ವಿಪರ್ಯಾಸ.

ದಿನನಿತ್ಯದ ದೂರುಗಳಲ್ಲಿ ಶೇ. ೪೦ಕ್ಕೂ ಹೆಚ್ಚು ಪಾಲು ಮೊಬೈಲ್ ಗಲಾಟೆಯದ್ದೇ ಆಗಿದೆ. ಕೇವಲ ಕಾನೂನು ರೂಪಿಸುವುದಷ್ಟೇ ಅಲ್ಲದೆ ಪ್ರತಿಯೊಂದು ಬೋಗಿಯಲ್ಲೂ ಜಾಗೃತಿ ಫಲಕಗಳನ್ನು ಅಳವಡಿಸಬೇಕು. ಧ್ವನಿವರ್ಧಕಗಳ ಮೂಲಕ ನಿಯಮದ ಬಗ್ಗೆ ನಿರಂತರ ಘೋಷಣೆ ಮಾಡಬೇಕು. ಟಿಕೆಟ್ ಪರೀಕ್ಷಕರು ಕಟ್ಟುನಿಟ್ಟಾಗಿ ಇದನ್ನು ಜಾರಿಗೆ ತಂದಾಗ ಮಾತ್ರ ಶಾಂತಿಯುತ ಪ್ರಯಾಣ ಸಾಧ್ಯ.

-ಡಾ. ಎಚ್. ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!