Mysore
29
scattered clouds

Social Media

ಸೋಮವಾರ, 18 ಮೇ 2026
Light
Dark

ಓದುಗರ ಪತ್ರ: ಮೆಟ್ರೋಗೆ ಶಂಕರ್ ನಾಗ್ ಹೆಸರಿಡಿ

ಓದುಗರ ಪತ್ರ

ರಾಜ್ಯ ಸರ್ಕಾರ ನಮ್ಮ ಮೆಟ್ರೋಗೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರು ಇಡಲು ನಿರ್ಧರಿಸಿರುವುದು ಶ್ಲಾಘನೀಯ. ಆದರೆ ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ಮೆಟ್ರೋದ ಸರ್ವೆ ಮಾಡಿ ೧೯೮೬-೮೭ರಲ್ಲಿ ಈ ಮಹತ್ತರ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟ ಶಂಕರ್ ನಾಗ್ ಅವರ ಹೆಸರನ್ನು ಒಂದು ಮೆಟ್ರೋ ನಿಲ್ದಾಣಕ್ಕಾದರೂ ಇಡ ಬೇಕೆಂಬುದು ಬಹು ದಿನಗಳ ಬೇಡಿಕೆ.

ಅವರ ಹೆಸರಿನಲ್ಲಿ ನಿಲ್ದಾಣಕ್ಕೆ ಹೆಸರು ಇಡುವುದರಿಂದ ನಾಡಿನ ಪ್ರತಿಭಾವಂತ ನಟನಿಗೆ ಗೌರವ ಸಲ್ಲಿಸಿ ದಂತಾಗುತ್ತದೆ. ಜನರು ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿ ಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಆಗಬೇಕೆಂಬುದೂ ಕೂಡ ಶಂಕರ್ ನಾಗ್ ಅವರ ಕನಸಾಗಿತ್ತು. ಅದು ಇದೀಗ ನನಸಾಗಿದ್ದು, ರಾಜ್ಯ ಸರ್ಕಾರ ಈ ವಿಷಯವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ನಾಡಿನ ಹಲವು ಜನರಿದ್ದಾರೆ.

-ಚೇತನ್ ಸಜ್ಜನ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Tags:
error: Content is protected !!