Mysore
28
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ೧೯ ಶಾಸಕರ ಪೈಕಿ ಎಂಟು ಜನರು ಇದೇ ಮೊದಲ ಬಾರಿಗೆ ಅವಕಾಶ ಪಡೆದವರು. ಉಳಿದ ೧೧ ಮಂದಿ ಬೇರೆ ಬೇರೆ ಸರ್ಕಾರಗಳಲ್ಲಿ ಸಚಿವರಾಗಿದ್ದವರು.

ಆದರೆ ಮೈಸೂರು ಭಾಗಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತೀಂದ್ರ ಸಿದ್ದರಾಮಯ್ಯನವರನ್ನು ಹೊರತುಪಡಿಸಿದರೆ ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನಿಭಾಯಿಸಿದ ಹಿರಿಯರಾದ ಡಾ. ಹೆಚ್. ಸಿ. ಮಹದೇವಪ್ಪ ಅವರಿಗಾಗಲೀ , ಮೈಸೂರು ನಗರದ ಮತ್ತೊಬ್ಬ ಹಿರಿಯರಾದ ಮತ್ತು ೨೦೦೨ರಿಂದ ೨೦೨೩ರರವರೆಗೂ ಸೋಲಿಲ್ಲದ ಸರದಾರನಾಗಿ ಗೆದ್ದು ಬಂದಂತಹ ಹಾಗೂ ಹಿಂದೆ ಕಾರ್ಮಿಕರ ಖಾತೆಯನ್ನು ನಿಭಾಯಿಸಿರುವ ಅನುಭವಿ ರಾಜಕಾರಣಿ ತನ್ವೀರ್ ಸೇಠ್ ಅವರಿಗಾಗಲೀ ಈ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕದೇ ಇರುವುದು ಮೈಸೂರಿನ ಹಿರಿಯ ಜನಪ್ರತಿನಿಧಿಗಳನ್ನು ಕಡೆಗಣಿಸಿದಂತಾಗಿದೆ. ಹೀಗಾಗಬಾರದಿತ್ತು.

-ಪಿ. ಸಿ. ಕಂಗಾಣಿ ಸೋಮು, ಮೈಸೂರು

 

Tags:
error: Content is protected !!