ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದಂತೆ ಪುರುಷರೂ ಕ್ರೌರ್ಯವನ್ನು ಅನುಭವಿಸುತ್ತಿದ್ದಾರೆ, ಕಷ್ಟಗಳನ್ನು ಎದುರಿಸಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಾಂವಿಧಾನಿಕ ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿದಿರುವುದು ಶ್ಲಾಘನೀಯ.
ಮಹಿಳೆಯರು ಹೆಚ್ಚಾಗಿ ಪುರುಷರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುವ ಜತೆಗೆ ಪುರುಷರ ಮೇಲೂ ಕಿರುಕುಳಗಳಾಗುತ್ತಿವೆ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಪುರುಷರೂ ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಎಲ್ಲ ಸರ್ಕಾರಗಳೂ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ ಸರಿ. ಆದರೆ ಪುರುಷರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗೆ ಸರ್ಕಾರ ಎಂದಾದರೂ ಗಮನಹರಿಸಿದೆಯೇ? ಅನೇಕ ಬಾರಿ ಇಂತಹ ಪ್ರಕರಣಗಳು ಸಮಾಜದ ಗಮನಕ್ಕೆ ಬರುವುದಿಲ್ಲ. ಆದರೆ ಈಗ ಹೈಕೋರ್ಟ್ ಈ ವಿಚಾರವನ್ನು ಪ್ರಸ್ತಾಪಿಸುವ ಮೂಲಕ, ಮಹಿಳೆಯರು ಮಾತ್ರ ಪುರುಷರ ಕ್ರೌರ್ಯಕ್ಕೆ ಬಲಿಯಾಗುತ್ತಿಲ್ಲ ಅಥವಾ ಶೋಷಣೆಯನ್ನು ಅನುಭವಿಸಿಲ್ಲ. ಬದಲಿಗೆ ಪುರುಷರೂ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ, ಕೆಲನಬಾರಿ ಶೋಷಣೆಗಳಿಗೆ ತುತ್ತಾಗಿದ್ದಾರೆ ಎಂದಿದೆ. ಆ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮುಂದಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.