Mysore
25
scattered clouds

Social Media

ಗುರುವಾರ, 13 ನವೆಂಬರ್ 2025
Light
Dark

ಓದುಗರ ಪತ್ರ: ಕಲಾಮಂದಿರದಲ್ಲಿ ಮಾಂಸಾಹಾರ ಸೇವನೆ ಸಲ್ಲದು

dgp murder case

ಮೈಸೂರು ನಗರಕ್ಕೆ ಮುಕುಟದಂತಿರುವ ಕರ್ನಾಟಕ ಕಲಾಮಂದಿರದಲ್ಲಿ ಕಳೆದ ಗುರುವಾರ ರಾತ್ರಿ ದಸರಾ ಸಾಂಸ್ಕೃತಿಕ ಉಪಸಮಿತಿಯ ಅಧಿಕಾರೇತರ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ದಸರಾ ಸಮಿತಿಯವರು ಅಲ್ಲಿಯೇ ಬಾಡೂಟ ಸೇವಿಸಿರುವುದು ಬೇಸರದ ಸಂಗತಿ. ಈ ಹಿಂದೆ ಕಲಾಮಂದಿರದಲ್ಲಿ ನಡೆದ — ಕಾರ್ಯಕ್ರಮವೊಂದರಲ್ಲಿ ಮಾಂಸದೂಟದ ವ್ಯವಸ್ಥೆ ಮಾಡಿದ್ದಾಗ ಮೈಸೂರಿನ ಅನೇಕ ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ ಇಲ್ಲಿ ಯಾವುದೇ ರೀತಿಯ ಊಟದ ವ್ಯವಸ್ಥೆ ಮಾಡಬಾರದು. ಒಂದು ವೇಳೆ ಮಾಡಿದರೂ ಕಲಾಮಂದಿರದ ಹೊರಭಾಗದಲ್ಲಿ ಸಸ್ಯಾಹಾರಕ್ಕೆ ಮಾತ್ರ ವ್ಯವಸ್ಥೆ ಕಲ್ಪಿಸಬೇಕು ಎಂದು ತೀರ್ಮಾನಿಸಲಾಗಿತ್ತು.
ಕಲಾಮಂದಿರಕ್ಕೆ ಎಲ್ಲ ಸಮುದಾಯದವರೂ ಬಂದು ಹೋಗುವುದರಿಂದ ಇಲ್ಲಿ ಮಾಂಸಾಹಾರ ಸೇವನೆ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ಈ ನಿರ್ಧಾರ ಮಾಡಲಾಗಿತ್ತು. ಇದರ ಕನಿಷ್ಠ ಜ್ಞಾನವೂ ಇಲ್ಲದೆ ಕೆಲ ಅಧಿಕಾರಿಗಳು ಮಾಂಸಾಹಾರ ಸೇವನೆ ಮಾಡಿರುವುದು ತಪ್ಪು. ಅಧಿಕಾರಿಗಳಿಗೆ ತಾವು ಏನೇ ಮಾಡಿದರೂ ಯಾರೂ ಪ್ರಶ್ನಿಸುವುದಿಲ್ಲ ಎಂಬ ಉದ್ಧಟತನವಿರುತ್ತದೆ ಎಂಬುದು ಇಲ್ಲಿ ಎದ್ದುಕಾಣುತ್ತದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಕಲಾಮಂದಿರದ ಒಳಗೆ ಮಾಂಸಾಹಾರಸೇವನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags:
error: Content is protected !!