Mysore
18
scattered clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಓದುಗರ ಪತ್ರ: ಯುವ ಸಂಭ್ರಮದಲ್ಲಿ ಹಲವಾರು ತೊಡಕುಗಳು!

ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮ ಕಾರ್ಯಕ್ರಮವು ಅನೇಕ ತೊಡಕುಗಳಿಂದ ಕೂಡಿದ್ದು, ವ್ಯವಸ್ಥಿತವಾಗಿ ಆಯೋಜನೆಗೊಂಡಿರಲಿಲ್ಲ ಎಂದೆನಿಸಿತು.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನೃತ್ಯ ತಂಡಗಳ ಆಯ್ಕೆಯಲ್ಲಿಯೂ ಯಾವುದೇ ಮಾನದಂಡಗಳಿರಲಿಲ್ಲ. ಇದರಿಂದಾಗಿ ಸಾಕಷ್ಟು ನೃತ್ಯಗಳು ಪುನರಾವರ್ತನೆಯಾದವು, ಅಲ್ಲದೆ ಭಾಗವಹಿಸುವ ತಂಡಗಳ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಅನೇಕ ತಂಡಗಳಿಗೆ ಪೂರ್ಣ ನೃತ್ಯ ಮಾಡಲು ಅವಕಾಶ ನೀಡದೆ ಆಯೋಜಕರು ತಮ್ಮಿಚ್ಛೆಯಂತ ಅರ್ಧದಲ್ಲಿಯೇ ದೃಶ್ಯಗಳನ್ನು ನಿಲ್ಲಿಸಿದರು. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ವೇದಕೆ ಹತ್ತುವ ಅವಕಾಶವೇ ಸಿಗಲಿಲ್ಲ, ಅಲ್ಲದೆ ದೂರದ ಊರುಗಳಿಂದ ಬಂದಿದ್ದ : ನೃತ್ಯವನ್ನು ಪ್ರದರ್ಶಿಸಲಾಗದೆ ನಿರಾಸೆಯಿಂದ ಹಿಂದಿರುಗುವಂತಾಯಿತು.
ಮುಂದಿನ ಬಾರಿಯಾದರೂ ಆಯೋಜಕರು ಯುವಸಂಭ್ರಮ ಕಾರ್ಯಕ್ರಮವನ್ನು ಯಾವುದೇ ತೊಡಕುಗಳಿಲ್ಲದೆ ಯಶಸ್ವಿಯಾಗಿ ಆಯೋಜಿಸಲಿ.
-ಸೇವಂತಿ, ಚಾಮರಾಜಪುರಂ, ಮೈಸೂರು.

Tags:
error: Content is protected !!