ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿ ಮೈಸೂರು ನಗರ ಪಾಲಿಕೆಯಿಂದ ಸ್ಥಾಪಿಸಿರುವ ಶುದ್ಧ ನೀರಿನ ಘಟಕ ಅನೈರ್ಮಲ್ಯದ ತಾಣವಾಗಿದೆ. ಐದು ರೂ. ನಾಣ್ಯ ಹಾಕಿ ನೀರನ್ನು ಪಡೆಯಲಾಗುತ್ತಿದೆ.
ಸಾರ್ವಜನಿಕರು ನೀರು ತೆಗೆದುಕೊಳ್ಳುವಾಗ ಹೆಚ್ಚುವರಿ ನೀರು ರಸ್ತೆ ಬದಿಯಲ್ಲಿ ನಿಂತು ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರಿದೆ. ಇದರಿಂದಾಗಿ ಡೆಂಗ್ಯು, ಮಲೇರಿಯಾ ಮೊದಲಾದ ರೋಗಗಳು ಹರಡುವ ಭೀತಿಯುಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳು ನೀರಿನ ಘಟಕದ ಬಳಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕಾಗಿದೆ.
– ಸದ್ಯೋಜಾತ, ಮೈಸೂರು





