Mysore
19
clear sky

Social Media

ಶುಕ್ರವಾರ, 06 ಡಿಸೆಂಬರ್ 2024
Light
Dark

ಓದುಗರ ಪತ್ರ: ಮಹಿಳೆಯರಿಂದಲೇ ಮಹಾಯುತಿಗೆ ಗೆಲುವು

ಕರ್ನಾಟಕದ ವಿಧಾನಸಭಾ ಚುನಾವಣಾ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿದ ಬಿಜೆಪಿಗೆ ಈಗ ಅದೇ ಮಾದರಿಯ ಗ್ಯಾರಂಟಿ ಯೋಜನೆಗಳು ಮಹಾರಾಷ್ಟ್ರದಲ್ಲಿ ಕೈಹಿಡಿದಿವೆ.

ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ‘ಲಾಡಕಿ, ಬಹಿನ್’ ಯೋಜನೆಯಡಿ ಮಾಸಿಕ 1,500 ರೂ.ಗಳನ್ನು ನೀಡುತ್ತಿರುವುದು ಈಗ ಬಿಜೆಪಿಗೆ ಗೆಲುವು ತಂದುಕೊಟ್ಟಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಹೊತ್ತಿಗಾಗಲೇ ಅಲ್ಲಿನ 2.50 ಕೋಟಿಗೂ ಹೆಚ್ಚು ಮಹಿಳೆಯರು 5 ಕಂತುಗಳಲ್ಲಿ 1,500 ರೂ. ಹಣ ಪಡೆದುಕೊಂಡಿದ್ದರು. ಅಲ್ಲದೆ ಚುನಾವಣೆ ಹತ್ತಿರ ಬರುತ್ತಿದ್ದಂತೆ 1,500 ರೂ.ಗಳನ್ನು 2,100 ರೂ.ಗಳಿಗೆ ಏರಿಸುವ ಭರವಸೆ ನೀಡಿದ ಬಿಜೆಪಿ ಮಹಿಳೆಯರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮವೋ ಏನೋ 2019ರ ಮಹಿಳಾ ಮತದಾನದ ಸರಾಸರಿಗಿಂತ ಈ ಬಾರಿ 53 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅಸ್ತ್ರವನ್ನು ಪ್ರಯೋಗಿಸಿ ಜಜೆಪಿ ಸಫಲತೆ ಕಂಡಿದೆ. ಇದೇ ಪಕ್ಷ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ “ಬಿಟ್ಟಿ ಭಾಗ್ಯಗಳನ್ನು ನೀಡಿ ಗೆದ್ದಿದ್ದಾರೆ’ ಎಂದು ಲೇವಡಿ ಮಾಡಿತ್ತು. ಈಗ ಬಿಜೆಪಿಯೂ ಅದೇ ಸೂತ್ರಕ್ಕೆ ಶರಣಾಗಿರುವುದನ್ನು ನೋಡಿದರೆ ಬಿಜೆಪಿ ‘ನಾವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಮ್ಮ’ ಎಂಬಂತೆ ವರ್ತಿಸಿದಂತಿದೆ.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.

Tags: