ಈ ಹಿಂದೆ ಮೈಸೂರಿನಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ 12 ಗಂಟೆಗೆ ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು. ಆದರೆ ಕೊರೊನಾ ಸಂದರ್ಭದಲ್ಲಿ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು.
ಈವರೆಗೂ ಸ್ಥಗಿತಗೊಳಿಸಲಾಗಿದ್ದ ರೈಲು ಸಂಚಾರ ಆರಂಭಗೊಳ್ಳದ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಸಾಮಾನ್ಯವಾಗಿ ದೂರದ ಊರಿಗೆ ರೈಲಿನಲ್ಲಿ ಪ್ರಯಾಣಿಸುವವರು ಹೆಚ್ಚಾಗಿ ರಾತ್ರಿ ವೇಳೆಯ ರೈಲುಗಳನ್ನೇ ಬಳಸುತ್ತಾರೆ. ಇದರಿಂದಾಗಿ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರೈಲು ಸದಾ ಪ್ರಯಾಣಿಕರಿಂದ ತುಂಬಿಕೊಳ್ಳುತ್ತಿತ್ತು, ವಿವಿಧ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಹೋಗಿ ಬರುತ್ತಿದ್ದ ಪ್ರಯಾಣಿಕರೂ ಇದೇ ರೈಲಿನಲ್ಲಿ ಸಂಚರಿಸುತ್ತಿದ್ದರು. ಆದರೆ ಕೊರೊನಾ ಬಳಿಕ ರೈಲು ಸಂಚಾರ ಸ್ಥಗತಿಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು ಮರಳಿ ಕಾರ್ಯಾರಂಭ ಮಾಡುವಂತೆ ಮಾಡಬೇಕಿದೆ.
-ಚಂದ್ರಶೇಖರ, ಅನಿಲರಾಜ, ಸುರೇಶ, ರಶ್ಮಿ, ಸುಜಾತ, ಜಾನಕಿ, ಸರೋಜ, ಸತೀಶ, ಚಕ್ರಪಾಣಿ, ಜಯಲಕ್ಷ್ಮೀಪುರಂ, ಮೈಸೂರು.