Mysore
29
scattered clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ಓದುಗರ ಪತ್ರ: ಜನೌಷಧಿ ಮಾದರಿಯಲ್ಲಿ ಪಶುಗಳ ಔಷಧಿಗೂ ವ್ಯವಸ್ಥೆ ಬರಲಿ

ಮಧ್ಯಮವರ್ಗ ಮತ್ತು ಬಡವರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಜನೌಷಧಿ ಕೇಂದ್ರಗಳು ತೆರೆಯಲ್ಪಟ್ಟಿವೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಇದರಂತೆ ಪಶು-ಪ್ರಾಣಿಗಳ ಔಷಧಿಗಳಿಗೂ ಜನೌಷಧಿ ಕೇಂದ್ರದ ಮಾದರಿಯಲ್ಲಿ ಬಂದರೆ ಸಾಕಷ್ಟು ಬಡ ರೈತರು ಉದ್ಧಾರವಾಗುವುದರಲ್ಲಿ ಸಂಶಯವಿಲ್ಲ. ಕಾರಣ ಈಗಿನ ಧಾರಣೆಯಲ್ಲಿ ಹಸುಗಳ ಪಾಲನೆ ಮಾಡುವುದು ತುಂಬಾ ಕಷ್ಟಕರ.

ಅವುಗಳು ಅನಾರೋಗ್ಯಕ್ಕೀಡಾದಾಗ ಖರೀದಿಸುವ ಔಷಧಿಗಳ ಬೆಲೆ ಬಹಳ ದುಬಾರಿ. ಬಡ ರೈತರು ದುಬಾರಿ ಬೆಲೆಯ ಔಷಧಿ ಖರೀದಿಸುವುದು ಕಷ್ಟ.ಆದರೂ ತಮ್ಮ ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೈನುಗಾರಿಕೆಯಲ್ಲಿ ತೊಡಗಿರುವವರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜನೌಷಧಿ ಮಾದರಿಯಲ್ಲಿ ಪಶುಗಳ ಔಷಧಿ ಕೇಂದ್ರಗಳನ್ನೂ ತೆರೆದರೆ ಬಹಳ ಅನುಕೂಲವಾಗುತ್ತದೆ.

-ಹೆಚ್.ಎಸ್. ಶಂಕರ್, ಮೈಸೂರು

Tags:
error: Content is protected !!