Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ:  ಇಸ್ರೇಲ್- ಇರಾನ್ ಯುದ್ಧ ಕೊನೆಗೊಳ್ಳಲಿ

ಓದುಗರ ಪತ್ರ

ಇರಾನ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಇರಾನಿನ ರಾಜಧಾನಿ ಟೆಹರಾನ್ ಮತ್ತು ಇತರ ನಗರಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಆತಂಕ ಮೂಡಿಸಿದೆ.

ಇಸ್ರೇಲ್‌ನ ವೈಮಾನಿಕ ಹಾಗೂ ಡ್ರೋನ್ ದಾಳಿಗಳು ವಿಶೇಷವಾಗಿ ಇರಾನಿನ ಅಣು ಸ್ಥಾವರಗಳು, ರಕ್ಷಣಾ ಸ್ಥಾವರಗಳು ಹಾಗೂ ಇರಾನಿನ ಇಸ್ಲಾಂ ನಾಯಕರ ನಿವಾಸಗಳ ಮೇಲೆ ನಡೆಯುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ದಶಕಗಳಿಂದಲೂ ಹೊಗೆಯಾಡುತ್ತಿದ್ದ ವೈರತ್ವ ಈಗ ಸೋಟಗೊಂಡಿದ್ದು, ಇಡೀ ವಿಶ್ವದಲ್ಲೇ ತಲ್ಲಣವನ್ನು ಸೃಷ್ಟಿಸಿದೆ. ಇಸ್ರೇಲ್ ಸಣ್ಣ ರಾಷ್ಟ್ರವಾದರೂ ಅತ್ಯಾಧುನಿಕ ಹಾಗೂ ಸುಸಜ್ಜಿತ ಸೇನೆಯನ್ನು ಒಳಗೊಂಡಿದ್ದು, ಪರಮಾಣು ಅಸ್ತ್ರಗಳನ್ನು ಹೊಂದಿದ ಬಲಿಷ್ಠ ರಾಷ್ಟ್ರವಾಗಿದೆ. ಅದೂ ಅಲ್ಲದೆ ಇಡೀ ವಿಶ್ವದಲ್ಲೇ ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೆಸರು ವಾಸಿಯಾಗಿದೆ. ಇರಾನ್ ಕೂಡ ಬಲಿಷ್ಠ ರಾಷ್ಟ್ರವಾಗಿದ್ದು ಇಸ್ಲಾಂ ರಾಷ್ಟ್ರಗಳ ಬೆಂಬಲವನ್ನು ಪಡೆದುಕೊಂಡಿದೆ. ಯುದ್ಧ ಇನ್ನೂ ತೀವ್ರ ಸ್ವರೂಪ ಪಡೆದುಕೊಂಡು ಪರಮಾಣು ಯುದ್ಧವಾಗಿ ಕೂಡ ಪರಿಣಮಿಸಬಹುದು. ಅನೇಕ ದೇಶಗಳಲ್ಲಿ ತೈಲ ಬೆಲೆ ಒಂದೇ ಸಮನೇ ಏರುತ್ತಿದೆ. ಅನೇಕ ದೇಶಗಳ ಷೇರುಪೇಟೆಗಳು ಕುಸಿಯಲು ಪ್ರಾರಂಭಿಸಿವೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಯುದ್ಧವನ್ನು ನಿಲ್ಲಿಸುವಂತೆ ಈ ಎರಡೂ ದೇಶಗಳ ಮೇಲೆ ಒತ್ತಡ ಹಾಕುತ್ತಿವೆ. ವಿಶ್ವಸಂಸ್ಥೆ ಕೂಡ ಯುದ್ಧವನ್ನು ಸ್ಥಗಿತಗೊಳಿಸಲು ಶ್ರಮಿಸುತ್ತಿದೆ. ಇರಾನ್ ಮತ್ತು ಇಸ್ರೇಲ್ ಈಗಲಾದರೂ ಯುದ್ಧವನ್ನು ನಿಲ್ಲಿಸಿ, ತಮ್ಮ ತಮ್ಮ ಸಮಸ್ಯೆಗಳನ್ನು ರಾಜತಾಂತ್ರಿಕ ವಿಧಾನಗಳ ಮೂಲಕ ಪರಿಹರಿಸಿಕೊಳ್ಳುವುದು ಅಗತ್ಯವಾಗಿದೆ.

 -ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

 

 

Tags:
error: Content is protected !!