Mysore
27
light rain

Social Media

ಶುಕ್ರವಾರ, 06 ನವೆಂಬರ್ 2026
Light
Dark

ಓದುಗರ ಪತ್ರ: ದೀಪಾವಳಿ ಅರ್ಥಪೂರ್ಣ ಆಚರಣೆಯಾಗಲಿ

ದೀಪಾವಳಿ ಬೆಳಕಿನ ಹಬ್ಬ. ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನವೆಂಬ ಬೆಳಕನ್ನು ಹರಡುವ ಈ ಹಬ್ಬವು ಸಂತೋಷ, ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಈ ಹಬ್ಬವನ್ನು ಕೇವಲ ಪಟಾಕಿ ಸಿಡಿಸುವುದಕ್ಕೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪಟಾಕಿಗಳ ಅತಿಯಾದ ಬಳಕೆಯಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಬೆಂಕಿ ಅವಘಡಗಳು ಸಂಭವಿಸುತ್ತಿವೆ.

ಆದ್ದರಿಂದ ಪೋಷಕರು ಮಕ್ಕಳಿಗೆ ಪಟಾಕಿಗಳ ಅಪಾಯದ ಕುರಿತು ಅರಿವು ಮೂಡಿಸಬೇಕು. ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ದೀಪಾವಳಿಗೆ ಆದ್ಯತೆ ನೀಡಬೇಕು. ಈ ಬಾರಿ ಮಣ್ಣಿನ ಹಣತೆಗಳನ್ನು ಬೆಳಗಿಸಿ, ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಹಬ್ಬ ಆಚರಿಸೋಣ. ಬಡವರಿಗೆ, ನಿರ್ಗತಿಕರಿಗೆ ಬಟ್ಟೆ, ಸಿಹಿತಿಂಡಿ ಹಾಗೂ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ಸಂತೋಷದಲ್ಲಿ ಪಾಲ್ಗೊಳ್ಳೋಣ. ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಹಣತೆಗಳನ್ನು ಖರೀದಿಸಿ ಅವರ ಬದುಕಿಗೆ ಆಸರೆಯಾಗೋಣ. ಅನಗತ್ಯ ಆಡಂಬರ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕೋಣ. ಮಾನವೀಯತೆಯ ಬೆಳಕನ್ನು ಹರಡೋಣ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!