ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ ಪ್ರಜಪ್ರಭುತ್ವದ ಆಶಯಗಳಿಗೆ ಕಪ್ಪುಚುಕ್ಕೆಯಾಗಿದೆ. ಸಾರ್ವಜನಿಕರ ಹಿತಾಸಕ್ತಿ ಕಡೆ ಗಮನಹರಿಸಬೇಕಾದ ರಾಜಕಾರಣಿಗಳು ವೈಯಕ್ತಿಕ ತೇಜೋವಧೆ ಹಾಗೂ ರಾಜಕೀಯ ಲಾಭಕ್ಕಾಗಿ ಇಂತಹ ತಂತ್ರಗಳನ್ನು ಬಳಸುವುದು ಆತಂಕಕಾರಿ ಬೆಳವಣಿಗೆ.
ಮಾಧ್ಯಮಗಳ ಸ್ಟಿಂಗ್ ಆಪರೇಷನ್ ಮೂಲತಃ ಭ್ರಷ್ಟಾಚಾರವನ್ನು ಬಯಲಿಗೆಳೆ ಯುವುದು ಉತ್ತಮ ಮಾರ್ಗವಾಗಿತ್ತು. ಆದರೆ ಈ ದಿನಮಾನಗಳಲ್ಲಿ ಅದು ಎದುರಾಳಿಗಳನ್ನು ಮಣಿಸಲು, ಹೆದರಿಸಲು ಮತ್ತು ಬ್ಲಾಕ್ಮೇಲ್ ಮಾಡಲು ಬಳಸುವ ಅಸವಾಗುತ್ತಿರುವುದು ಬೇಸರ ಉಂಟುಮಾಡುತ್ತದೆ.
ರಾಜಕೀಯ ಪಕ್ಷಗಳು ವೈಯಕ್ತಿಕ ನಿಂದನೆ ಬಿಟ್ಟು ಮೌಲ್ಯಾಧಾರಿತ ರಾಜಕಾರಣಕ್ಕೆ ಆದ್ಯತೆ ನೀಡಬೇಕಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ಆರೋಪ, ಪ್ರತ್ಯಾರೋಪಗಳು ಏನೇ ಇದ್ದರೂ ಆ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಏಕೆಂದರೆ ರಾಜಕೀಯ ನೈತಿಕತೆ ಉಳಿದರೆ ಮಾತ್ರ ಪ್ರಜಪ್ರಭುತ್ವ ಉಳಿಯುತ್ತದೆ.
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ




