ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹಾಗೂ ನೂರಲಕುಪ್ಪೆ ಗ್ರಾಮಗಳ ನಡುವೆ ಇರುವ ಕೆರೆಯ ಏರಿಯ ಮೇಲಿನ ರಸ್ತೆಯ ಎರಡೂ ಅಂಚಿನಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು, ವಾಹನಗಳ ಸಂಚಾರಕ್ಕೆ
ಅಡಚಣೆಯಾಗುತ್ತಿದೆ.
ರಸ್ತೆ ರಾಮೇನಹಳ್ಳಿ, ಜಿಯಾರಾ, ನೂರಲಕುಪ್ಪೆ ‘ಸಿ’ ಯಲಮತ್ತೂರು, ಬೀಚನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಈ ರಸ್ತೆ ತಿರುವಿನಿಂದ ಕೂಡಿದ್ದು, ರಸ್ತೆಯ ಎರಡೂ ಅಂಚಿನಲ್ಲಿ ಗಿಡಗಂಟೆಗಳು ಬೆಳೆದುಕೊಂಡಿರುವುದರಿಂದ ತಿರುವಿನಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಕಾಣದೆ ಅಪಘಾತಗಳಾಗುವ ಸಾಧ್ಯತೆಗಳವೆ. ಇದೇ ರಸ್ತೆಯಲ್ಲಿ ನಿತ್ಯ ಗ್ರಾಮ ಪಂಚಾಯಿತಿಯ ಸದಸ್ಯರು ಓಡಾಡುತ್ತಿದ್ದರೂ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಈ ರಸ್ತೆಯ ಎರಡೂ ಅಂಚಿನಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕಿದೆ.
ಮಹೇಶ್ ಅಂತರಸಂತೆ, ಎಚ್.ಡಿ.ಕೋಟೆ ತಾ.