ಬಿಸಿಲಲ್ಲೋ ಅಣ್ಣ
ಇದು ಬರಿ ಬಿಸಿಲಲ್ಲೋ !
ಯಾರು ಹೆಸರಿಟ್ಟರೋ?
ಇದಕ್ಕೆ ‘ನಿಲ್ಲೋ ಎಲ್ಲೋ’
ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು
ಬಿಡುತ್ತಿಲ್ಲವಲ್ಲೋ ಅಣ್ಣಾ
ಕೆರೆಕಟ್ಟೆ ನದಿ ನಾಲೆಗಳನೆಲ್ಲಾ
ಬತ್ತಿಸುತಿಹ ಬಿಸಿಲು !
ನೆತ್ತಿ ಸುಡು ಸುಡು ಬಿಸಿಲು
ಮಣ್ಣ ಕಣಕಣವೆಲ್ಲವ
ರಣ ರಣಗುಟ್ಟಿಸುತಿಹ ಬಿಸಿಲು!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ,ಮೈಸೂರು




