Mysore
23
overcast clouds

Social Media

ಭಾನುವಾರ, 22 ಜೂನ್ 2025
Light
Dark

ಓದುಗರ ಪತ್ರ| ರಾಜಕಾರಣವೆಂದರೆ ಪರಸ್ಪರ ನಿಂದಿಸಿಕೊಳ್ಳುವುದೇ?

ರಾಜಕೀಯ ಮೌಲ್ಯಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ, ಜನ ಸೇವೆಯೇ ಜನಾರ್ಧನ ಸೇವೆ ಎಂದು ಜನರ ಸೇವಕನಂತೆ ಕೆಲಸ ಮಾಡುವುದೇ ರಾಜಕೀಯ ಎಂಬುದನ್ನು ಇಂದಿನ ರಾಜಕಾರಣಿಗಳು ಮರೆತಂತಿದೆ.

ಜನಪ್ರತಿನಿಧಿಯಾಗಿ ಆಯ್ಕೆ ಯಾದವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸ ಬೇಕು. ಪ್ರತಿಯೊಬ್ಬರ ಸಮಸ್ಯೆ ಗಳನ್ನೂ ಆಲಿಸಿ ಅವುಗಳಿಗೆ ಸ್ಪಂದಿಸಬೇಕು.

ಆದರೆ, ಇತ್ತೀಚೆಗೆ ರಾಜಕಾರಣ ಎಂದರೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪರಸ್ಪರ ನಿಂದಿಸುವುದು, ಆರೋಪಗಳನ್ನು ಮಾಡುವುದು ಎಂಬಂತಾಗಿದೆ. ಈಗಿನ ರಾಜಕಾರಣಿಗಳಂತೂ ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳಲು ಮುಂದಾಗಿದ್ದು, ಸಮಾಜದ ನೆಮ್ಮದಿಗೆ ಭಂಗವುಂಟು ಮಾಡುತ್ತಿದ್ದಾರೆ. ಅಲ್ಲದೆ ಪ್ರತಿಯೊಂದು ವಿಚಾರಕ್ಕೂ ವೈಯಕ್ತಿಕ ವಿಚಾರಗಳನ್ನು ಹಿಡಿದು ಅವರ ಬಗ್ಗೆ ಅವಹೇಳನ ಮಾಡುವುದೇ ರಾಜಕಾರಣಿಗಳ ಕೆಲಸವೇನೋ ಎಂಬಂತೆ ವರ್ತಿಸುತ್ತಿದ್ದಾರೆ.

ಆದ್ದರಿಂದ ರಾಜಕಾರಣಿಗಳಾದವರು ಪರಸ್ಪರ ನಿಂದಿಸಿಕೊಳ್ಳುವುದನ್ನು ಬಿಟ್ಟು ಜನಸೇವೆ ಮಾಡಲು, ನೊಂದವರ ಕಷ್ಟಗಳಿಗೆ ಸ್ಪಂದಿಸಲು ಮುಂದಾಗಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags:
error: Content is protected !!