Mysore
21
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಓದುಗರ ಪತ್ರ: ದುಡ್ಡಿಗೆ ಬೆಲೆ ಇಲ್ಲವೇ?

ಓದುಗರ ಪತ್ರ

ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನಮ್ಮ ಭಾರತೀಯ ಬ್ಯಾಂಕ್ಗಳು, ಕೇವಲ ಪೆನ್ನು,ಪೇಪರ್, ಸ್ಟೇಷನರಿ ವಸ್ತುಗಳು ಮತ್ತು ಮುದ್ರಣಕ್ಕಾಗಿ ೩,೮೭೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ ಎಂದುಮಾಧ್ಯಮಗಳು ವರದಿ ಮಾಡಿವೆ. ಅಚ್ಚರಿಯ ಸಂಗತಿ ಎಂದರೆ, ಭಾರ ತೀಯ ಸ್ಟೇಟ್ ಬ್ಯಾಂಕ್ ಒಂದೇ ಸುಮಾರು ಒಂದು ಸಾವಿರ ಕೋಟಿ ರೂ.ಹಣವನ್ನು ಸ್ಟೇಷನರಿಗಾಗಿ ಖರ್ಚು ಮಾಡಿದೆ.

ಬ್ಯಾಂಕ್‌ನಲ್ಲಿ ಗ್ರಾಹಕರು ಚೆಕ್ ಬುಕ್ ಪಡೆದಾಗ ಇಂತಿಷ್ಟು ಹಣವನ್ನು ಗ್ರಾಹಕರಿಂದಲೇ ವಸೂಲಿ ಮಾಡುತ್ತಿವೆ. ಗ್ರಾಹಕರ ಎಸ್‌ಬಿ ಖಾತೆಯಿಂದ ಈ ಹಣ ಡೆಬಿಟ್ ಆಗುವುದರಿಂದ ಬಹಳಷ್ಟು ಗ್ರಾಹಕರು, ಚೆಕ್ ಬುಕ್ ಅನ್ನು, ಬ್ಯಾಂಕ್‌ಗಳು ಫ್ರೀ ನೀಡುತ್ತಿವೆ ಎಂದು ಕೊಂಡಿದ್ದಾರೆ. ದೇಶವು ಎಲ್ಲ ಕಚೇರಿಗಳಲ್ಲೂ, ಕಾಗದ ರಹಿತ ಆಡಳಿತ ನಡೆಸಲು ಮುಂದಾಗಿದೆ. ಆದರೆ ನಮ್ಮ ಭಾರತೀಯ ಬ್ಯಾಂಕ್‌ಗಳು ಇನ್ನೂ ಓಬಿರಾಯನ ಕಾಲದ ಇವೆ. ಬ್ಯಾಂಕ್‌ಗಳು ಇನ್ನು ಮುಂದಾದರೂ ಆಧುನಿಕ ತಂತ್ರeನ ಬಳಸಿಕೊಂಡು, ಖರ್ಚು ಕಡಿಮೆ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಬೇಕು.

– ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!