Mysore
24
broken clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಓದುಗರ ಪತ್ರ: ರೇಷ್ಮೆ ನೂಲು ಘಟಕಕ್ಕೆ ಹೊಸ ಯಂತ್ರ ಅಳವಡಿಕೆ ಶ್ಲಾಘನೀಯ

ತಿ. ನರಸೀಪುರ ಪಟ್ಟಣದ ರೇಷ್ಮೆ ನೂಲು ತಯಾರಿಕಾ ಘಟಕಕ್ಕೆ ಹೊಸದಾಗಿ ಎರಡು ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಂಡಿರುವುದು ಘಟಕದ ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಾಗಿದೆ.

ಈ ಹಿಂದೆ ರೇಷ್ಮೆ ನೂಲು ತಯಾರಿಕಾ ಘಟಕದ ೫ ಎಕರೆ ಭೂಮಿಯನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಇಲಾಖೆಗೆ ಹಸ್ತಾಂತರಿಸಿದ್ದನ್ನು ಘಟಕದ ನೌಕರರು ಖಂಡಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಭೂಮಿಯನ್ನು ವಾಪಸ್ ಪಡೆಯಲಾಗಿತ್ತು. ಹೊಸ ಯಂತ್ರಗಳ ಅಳವಡಿಕೆಯ ಹಿನ್ನೆಲೆಯಲ್ಲಿ ೩೦ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಹೆಚ್ಚಿನ ರೇಷ್ಮೆ ನೂಲು ತಯಾರಿಕೆ ಯಾಗುವುದರಿಂದ ಮೈಸೂರಿನ ರೇಷ್ಮೆ ಸೀರೆ ತಯಾರಿಕಾ ಘಟಕದ ಬೇಡಿಕೆಗೆ ಅನುಗುಣವಾಗಿ, ರೇಷ್ಮೆ ನೂಲು ಪೂರೈಸಲು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹೊಸ ಯಂತ್ರಗಳು ಸಹಕಾರಿಯಾಗುತ್ತದೆ. ತನ್ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದ ಈ ಕಾರ್ಖಾನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದಾಗಿದೆ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

Tags:
error: Content is protected !!