Mysore
21
clear sky

Social Media

ಗುರುವಾರ, 19 ಮಾರ್ಚ್ 2026
Light
Dark

ಓದುಗರ ಪತ್ರ: ಗೀತೆ ರಚನಾಕಾರರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ

ಓದುಗರ ಪತ್ರ

ಪ್ರೇಮ್ ನಿರ್ದೇಶನದ ಕನ್ನಡ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ.. ಎಂಬ ಗೀತೆ ದ್ವಂದ್ವಾರ್ಥದ ಕೀಳು ಅಭಿರುಚಿಯ ಹಾಡು ಈಗ ವಿವಾದ ವೆಬ್ಬಿಸಿದೆ. ಹಿಂದಿಯಲ್ಲೂ ಇರುವ ಈ ಹಾಡಿನ ಬಗ್ಗೆ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್‌ರವರು, ಗೀತೆರಚನಾಕಾರರು ಇಷ್ಟು ಕೆಳ ಮಟ್ಟಕ್ಕೆ ಇಳಿದಿದ್ದನ್ನು ನೋಡಲು ಬೇಸರವಾಗುತ್ತದೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಆದರೂ ಗೀತೆರಚನಾಕಾರರು ಇದನ್ನು, ನೋಡುವ, ಕೇಳುವ, ದೃಷ್ಟಿಕೋನ ಅವಲಂಬಿಸಿದೆ ಎಂದು ಸಮರ್ಥಿಸಿಕೊಂಡಿರುವುದು, ಹಾಗೂ ಇಷ್ಟಾದರೂ ಚಿತ್ರದಲ್ಲಿ ಈ ಹಾಡು ಇರಲಿದೆ ಎಂದಿರುವುದು ಅವರ ಕೀಳು ಅಭಿರುಚಿಗೆ ಸಾಕ್ಷಿಯಾಗಿದೆ.

ನ್ಯಾಯಾಲಯಗಳು ಇದನ್ನು ಗಮನಿಸಿ ಸುಮೊಟೊ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ದ್ವಂದ್ವಾರ್ಥದ ಪದ, ಹಾಡು ಸಂಭಾಷಣೆಗಳಿಗೆ ಅನುಮತಿ ನೀಡಿರುವ ಸೆನ್ಸಾರ್ ಮಂಡಳಿ ವಿರುದ್ಧವೂ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

 -ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

 

Tags:
error: Content is protected !!