Mysore
22
overcast clouds

Social Media

ಭಾನುವಾರ, 25 ಅಕ್ಟೋಬರ್ 2026
Light
Dark

ಓದುಗರ ಪತ್ರ: ಇ- ಕೆವೈಸಿ: ಮತ್ತಷ್ಟು ಆಧಾರ್ ಕೇಂದ್ರಗಳನ್ನು ಆರಂಭಿಸಿ

ಪಡಿತರ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರು ಇ- ಕೆವೈಸಿ ಮಾಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಇದಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಮೂರು ಆಧಾರ್ ಸೆಂಟರ್ ಇವೆ. ತಾಲ್ಲೂಕು ಕಚೇರಿಯಲ್ಲಿ ಒಂದು ದಿನಕ್ಕೆ ೧೫ ರಿಂದ ೨೦ ಜನಕ್ಕೆ ಮಾತ್ರ ಟೋಕನ್ ಕೊಟ್ಟು ಕಳಿಸುತ್ತಾರೆ. ಇದರಿಂದ ಅನೇಕರು ನಿರಾಸೆಯಿಂದ ತೆರಳಬೇಕಾಗುತ್ತದೆ.

ಸರಗೂರು ತಾಲ್ಲೂಕಿನ ಗಡಿಭಾಗದಿಂದ ಬರುವ ವಯಸ್ಸಾದವರಿಗೆ ಹಾಗೂ ವಿಕಲಚೇತನರಿಗೆ ಬಹಳ ತೊಂದರೆ ಆಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹೆಗ್ಗಡದೇವನಕೋಟೆಯ ಹೋಬಳಿ ಮಟ್ಟದಲ್ಲಿ ಅಂದರೆ ಅಂತರಸಂತೆ, ಆ ಮಟಕೇರೆ, ಹಂಪಾಪುರ ಹಾಗೂ ಹಣ್ಣೂರು ಭಾಗದಲ್ಲಿ ಮತ್ತಷ್ಟು ಆಧಾರ್ ಸೆಂಟರ್ ಆರಂಭಿಸಿದರೆ ಹೆಚ್ಚು ಅನುಕೂಲವಾಗುತ್ತದೆ.

ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ. ಹೆಚ್.ಡಿ. ಕೋಟೆ ತಾಲ್ಲೂಕು

Tags:
error: Content is protected !!