ಮೈಸೂರಿನಲ್ಲಿ ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘನೆಯಾದ ಕಟ್ಟಡಗಳು ಪೂರ್ಣಗೊಂಡಿದ್ದರೂ ಸಿ.ಆರ್. (ಕಟ್ಟಡ ಪ್ರಮಾಣ ಪತ್ರ ) ಸಿಗದೆ ಸಾರ್ವಜನಿಕರು ಪರಿತಪಿಸುತ್ತಿದ್ದುದು ಸರಿಯಷ್ಟೇ.
ಕಟ್ಟಡಗಳನ್ನು ಕಟ್ಟುವಾಗ ಪ್ಲಾನ್ ಪ್ರಕಾರ ಕಟ್ಟದೆ ಶೇ. ೫ ರಿಂದ ಶೇ. ೧೫ ರಷ್ಟು ಉಲ್ಲಂಘನೆಯಾಗಿ ಪೂರ್ಣಗೊಂಡಿರುವ ಕಟ್ಟಡಗಳಿಗೆ, ನಿಯಮಾನುಸಾರ ಶುಲ್ಕ ಪಾವತಿಸಿಕೊಂಡು ಪಾಲಿಕೆ ವ್ಯಾಪ್ತಿಯ ಎಲ್ಲ ೯ ವಲಯ ಕಚೇರಿಗಳಲ್ಲೂ ವಿಶೇಷ ಅಭಿಯಾನದಡಿ ಡಿ.೪ ರಿಂದ ಅರ್ಜಿ ಸ್ವೀಕಾರ ಮಾಡಿ, ಜ. ೮,೨೦೨೭ ರಿಂದ ಸಿ ಆರ್ (ಕಟ್ಟಡ ಪ್ರಮಾಣಪತ್ರ) ವಿತರಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಅವರು ಹೇಳಿರುವುದು ನೆಮ್ಮದಿಯ ವಿಚಾರ. ಇ- ಖಾತಾ ಅಭಿಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಿ ಆರ್ ವಿಶೇಷ ಅಭಿಯಾನ ಮುನ್ನೆಲೆಗೆ ಬಂದಿದ್ದು ಅಗತ್ಯವಿದ್ದವರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು



