Mysore
25
overcast clouds

Social Media

ಶನಿವಾರ, 17 ಅಕ್ಟೋಬರ್ 2026
Light
Dark

ಓದುಗರ ಪತ್ರ: ‘ಈ ಮಾತು’ ಶೋಭೆ ತರುವುದೇ?

dgp murder case

‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿರುವ ಮಾತು. ಕುಮಾರಸ್ವಾಮಿ ಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ಅವರ ನಡುವೆ ಆಪರೇಷನ್ ಸ್ಟಿಂಗ್ (ಮಾರು ವೇಷದ ಕಾರ್ಯಾಚರಣೆ) ವಿಚಾರ ತಾರಕಕ್ಕೆ ಹೋಗುತ್ತಿದೆ. ಖರ್ಗೆ ಆಡಿರುವ ಮಾತು ಅವರು‘ಅಲಂಕರಿಸಿರುವ’ ಹುದ್ದೆಗೆ, ವ್ಯಕ್ತಿತ್ವಕ್ಕೆ ತಕ್ಕುದಲ್ಲಎಂದೇ ಹೇಳಬಹುದು.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಅಧಿಕಾರ ಇದ್ದಾಗ ಬಾಯಿಗೆ ಬಂದಂತೆ ಮಾತಾನಾಡುವುದು ಗೃಹ ಸಚಿವರಿಗೆ ಶೋಭೆ ತರುವುದಿಲ್ಲ. ಒಂದು ವೇಳೆ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಆದರೆ ಪ್ರಜ್ಞಾವಂತ ಸಮಾಜ ಹೇಗೆ ನೋಡುತ್ತದೆ ಎಂಬ ಅರಿವಾದರೂ ಇರಬೇಕು ಪ್ರಿಯಾಂಕ್ ಆವರಿಗೆ. ರಾಜ್ಯ ರಾಜಕಾರಣದಲ್ಲಿ ನಿಮಗೆ ಇನ್ನೂ ಭವಿಷ್ಯವಿದೆ, ಯಾರನ್ನೋ ಮೆಚ್ಚಿಸಲು ಅಥವಾ ಅಧಿಕಾರದ ಅಮಲಿನಲ್ಲಿ, ಏನೇನೂ ಮಾತನಾಡಬರಾದರದಲ್ಲವೇ? ‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಎಂಬ ಬಸವಣ್ಣನವರ ವಚನ ಪೂರ್ಣವಾಗಿ ಯಲ್ಲದಿದ್ದರೂ ಅದರ ಸ್ವಲ್ಪಭಾಗವನ್ನಾದರೂ ರಾಜಕಾರಣಿಗಳು ಅನುಸರಿಸಿದರೆ ನಾಯಕತ್ವಕ್ಕೆ ಶೋಭೆ ಬರುತ್ತದೆ.

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!