Mysore
21
overcast clouds

Social Media

ಬುಧವಾರ, 22 ಜುಲೈ 2026
Light
Dark

ಓದುಗರ ಪತ್ರ: ಸಂಸತ್ ಚಲೋ ತಡೆಗೆ ನಡೆದಿತ್ತೆ ಹುನ್ನಾರ?

ಓದುಗರ ಪತ್ರ

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ವತಿಯಿಂದ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದು ಅಮಾನವೀಯ. ಈ ಪ್ರತಿಭಟನೆ ವೇಳೆ ಸಂಸತ್ ಭವನಕ್ಕೆ ಭದ್ರತೆ ಒದಗಿಸಲು ನಿಯೋಜಿಸಿದ್ದ ಪೊಲೀಸರ ಸಮವಸ್ತ್ರದಲ್ಲಿ ‘ನೇಮ್ ಟ್ಯಾಗ್ (ಹೆಸರಿನ ಪಟ್ಟಿ)’ ಇರಲಿಲ್ಲವೇಕೆ? ವಾಹನಗಳ ಸಂಚಾರ ನಿಯಂತ್ರಣಕ್ಕೆ ನಿಯೋಜನೆಯಾಗುವ ಪೊಲೀಸರ ಸಮವಸ್ತ್ರದಲ್ಲೇ ನೇಮ್ ಟ್ಯಾಗ್ ಇರುತ್ತದೆ. ಇಂತಹ ದೊಡ್ಡ ಮಟ್ಟದ ಪ್ರತಿಭಟನೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ನೇಮ್ ಟ್ಯಾಗ್ ಇಲ್ಲವೆಂದರೆ ಹೇಗೆ? ಇದಲ್ಲದೆ, ಪ್ರತಿಭಟನೆ ದಿನ ಬೆಳಿಗ್ಗೆಯಿಂದಲೆ ಮೆಟ್ರೋದಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಪರೋಕ್ಷವಾಗಿ ತಡೆಯೊಡ್ಡಲಾಗಿತ್ತು. ಅಂದರೆ ಸಂಸತ್ ಚಲೋಗೆ ಬರುವವರನ್ನು ನಿಯಂತ್ರಿಸುವ ಹುನ್ನಾರ ನಡೆದಿತ್ತೇ? ಮತ್ತು ಅಂದು ಹೊಸದಿಲ್ಲಿಯಲ್ಲಿ ಅಂತರ್ಜಾಲ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಪ್ರತಿಭಟನಾಕಾರರ ಮೇಲೆ ನಡೆಸುವ ದೌರ್ಜನ್ಯ ಆ ಪ್ರದೇಶದಿಂದ ಹೊರಗೆ ಪ್ರಸಾರ ಆಗಬಾರದು ಎಂಬ ದುರಾಲೋಚನೆಯಾಗಿತ್ತೇ? ಈ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಈ ಎಲ್ಲ ಬೆಳವಣಿಗೆಗಳನ್ನೂ ಗಮನಿಸಿದರೆ, ಸಿಜೆಪಿಯ ‘ಸಂಸತ್ ಚಲೋ’ಗೆ ಅಡ್ಡಿಪಡಿಸಲು ಕಾಣದಕೈಗಳು ಪ್ರಯತ್ನ ನಡೆಸಿದ್ದವು ಎಂಬ ಅನುಮಾನ ಬೃಹದಾಕಾರವಾಗಿ ಕಾಡುತ್ತಿದೆ. ಇದರ ಹಿಂದೆ ಯಾವುದೇ ಜನಪ್ರತಿನಿಧಿ, ರಾಜಕೀಯ ನಾಯಕರ ಹುನ್ನಾರ ಇಲ್ಲ ಎಂದು ನಾವು ಭಾವಿಸಬಹುದೇ?

-ಜಿ.ಜಯಪ್ರಕಾಶ್, ಕುವೆಂಪುನಗರ, ಮೈಸೂರು

Tags:
error: Content is protected !!