Mysore
24
few clouds
Light
Dark

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಎಚ್.ಡಿ.ಕೋಟೆ ತಾಲ್ಲೂಕಿನ ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಲ್ಲಿರುವ ಕೆ.ಜಿ.ಹಳ್ಳಿ ಗ್ರಾಮದ ಬಸ್ ತಂಗುದಾಣವು ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿದು ಬೀಳುವ ಹಂತದಲ್ಲಿದೆ.

ಈ ಬಸ್ ತಂಗುದಾಣವನ್ನು ನಿರ್ಮಿಸಿ
ಸುಮಾರು 20 ವರ್ಷಗಳೇ ಕಳೆದಿವೆ. ಇಷ್ಟು ಹಳೆಯದಾದ ತಂಗುದಾಣವನ್ನು ಸರಿಯಾಗಿ ನಿರ್ವಹಿಸದ ಪರಿಣಾಮ ಇದು ಶಿಥಿಲಗೊಂಡಿದ್ದು, ಇಂದೋ ನಾಳೆಯೋ ಬೀಳುವ ಹಂತ ತಲುಪಿದೆ. ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ತಂಗುದಾಣ ಮತ್ತಷ್ಟು ಹದಗೆಟ್ಟಿದ್ದು, ಜನರು ತಂಗುದಾಣದೊಳಗೆ ಆಶ್ರಯ ಪಡೆಯಲು ಹೆದರುವಂತಾಗಿದೆ. ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಇದೇ ತಂಗುದಾಣದಲ್ಲಿ ನಿಂತು ಬಸ್ ಹತ್ತಬೇಕು. ಈ ವೇಳೆ ಏನಾದರೂ ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಈ ತಂಗುದಾಣವನ್ನು ನೆಲಸಮ ಮಾಡಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಬೇಕಿದೆ.
-ಕೆ.ಎಸ್.ಸುರೇಶ್, ಕೆ.ಜಿ.ಹಳ್ಳಿ, ಎಚ್.ಡಿ.ಕೋಟೆ ತಾ.