ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ಜನರು ಹಬ್ಬಗಳನ್ನು ಆತಂಕದಲ್ಲೇ ಆಚರಿಸುವಂತೆ ಮಾಡಿತ್ತು. ಇಂತಹ ಆತಂಕದ ಸಂದರ್ಭದಲ್ಲಿಯೂ ಸೂಕ್ಷ್ಮ ಪ್ರದೇಶವಾದ ನಗರದ ಕ್ಯಾತಮಾರನಹಳ್ಳಿಯಲ್ಲಿ ಹುಲಿಯಮ್ಮನ ಜಾತ್ರೆಯು ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆಯಲು ಪೊಲೀಸ್ ಸಿಬ್ಬಂದಿ ಶ್ರಮಿಸಿದ್ದು, ಅಭಿನಂದನಾರ್ಹರಾಗಿದ್ದಾರೆ.
ಹತ್ತು ದಿನಗಳ ಕಾಲ ನಡೆದ ಗ್ರಾಮ ದೇವತೆ ಹುಲಿಯಮ್ಮನ ಜಾತ್ರಾ ಮಹೋತ್ಸವದ ವೇಳೆ ಜಾತ್ರೆಗೂ ಮುನ್ನ ಪೊಲೀಸ್ ಅಧಿಕಾರಿಗಳು ವಿವಿಧ ಸಮುದಾಯಗಳ ಮುಖಂಡರ ಜತೆ ಸಮನ್ವಯ ಸಭೆ ನಡೆಸಿ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಜಾತ್ರಾ ಮಹೋತ್ಸವದ ಹತ್ತು ದಿನಗಳ ಕಾಲವೂ ಯಾವುದೇ ಗಲಭೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವ ಜತೆಗೆ ಸೂಕ್ಷ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡುವ ಮೂಲಕ ಶಾಂತಿಯುತವಾಗಿ ಜಾತ್ರೆ ನಡೆಯಲು ಅನುವು ಮಾಡಿಕೊಟ್ಟರು. ಜಾತ್ರೆ ಸುಗಮವಾಗಿ ನಡೆಯಲು ಹಗಲು-ರಾತ್ರಿ ಶ್ರಮಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.