Mysore
28
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಓದುಗರ ಪತ್ರ:  ಯುಜಿಡಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಿ

ಓದುಗರ ಪತ್ರ

ಮೈಸೂರಿನ ಕುವೆಂಪು ನಗರ ಎನ್-ಬ್ಲಾಕ್‌ನ ಆದಿಚುಂಚನಗಿರಿ ಮುಖ್ಯ ರಸ್ತೆಯ ಬನಶಂಕರಿ ದೇವಸ್ಥಾನ ಮತ್ತು ಮಹದೇಶ್ವರ ದೇವಸ್ಥಾನದ ಸರ್ಕಲ್‌ಗಳಲ್ಲಿ ಕಳೆದ ಎರಡು ದಿನಗಳಿಂದ ಒಳಚರಂಡಿ ನೀರು ಮುಖ್ಯರಸ್ತೆಯ ಮೇಲೆ ಹರಿದು ಕೆರೆಯಂತಾಗಿದ್ದು, ದುರ್ನಾತ ಬೀರುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಓಡಾಡುವುದು ಅನಿವಾರ್ಯವಾಗಿದೆ.

ನಗರ ಪಾಲಿಕೆ ಅಧಿಕಾರಿಗಳು ಕಳೆದ ವಾರವಷ್ಟೇ ಈ ಒಳಚರಂಡಿಯನ್ನು ಕಾಟಾಚಾರಕ್ಕೆ ದುರಸ್ತಿಗೊಳಿಸಿದ್ದಾರೆ. ಮತ್ತೆ ಅದೇ ಸಮಸ್ಯೆ ಉಂಟಾಗುತ್ತಿದೆ. ನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.

 – ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!