ಮೈಸೂರಿನ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿನ ಸೆಂಥಿಲ್ ಕುಮಾರ್ ಟೆಕ್ಸ್‌ಟೈಲ್ಸ್ ಹಿಂಭಾದ ರಾಜಕಾಲುವೆಯ ಬಳಿ ಇರುವ ಮ್ಯಾನ್ ಹೋಲ್ ನಿಂದ ಕೊಳಚೆ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿರುವ ನಿವಾಸಿಗಳು ಗಬ್ಬು ವಾಸನೆಯಿಂದಾಗಿ ಮನೆ ಬಾಗಿಲು ತೆರೆಯಲೂ ಹಿಂಜರಿಯುವಂತಾಗಿದೆ. ಇಲ್ಲಿನ ಮ್ಯಾನ್ ಹೋಲ್‌ನಲ್ಲಿ ಕಸ ಕಟ್ಟಿಕೊಂಡು ಪದೇ ಪದೇ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಮಹಾನಗರಪಾಲಿಕೆ ಅಧಿಕಾರಿಗಳು ಕೂಡಲೇ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
-ನಿಂಗರಾಜು, ಮೈಸೂರು





