Mysore
26
light rain

Social Media

ಭಾನುವಾರ, 06 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ದೇವೇಗೌಡರ ಹಿಂದಿನ ಶಕ್ತಿ ಚನ್ನಮ್ಮ  

ಓದುಗರ ಪತ್ರ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ನವರು ಅವರ ರಾಜಕೀಯ ಜೀವನದಲ್ಲಿ ದೊಡ್ಡ ಶಕ್ತಿಯಾಗಿ ನಿಂತಿದ್ದರು. ಅಂದು ತಮ್ಮ ಮೇಲಾದ ಆಸಿಡ್ ದಾಳಿಗೂ ಜಗ್ಗದೆ, ದಾಳಿ ಮಾಡಿದವರನ್ನೂ ಕ್ಷಮಿಸಿದ ಅವರು ಮಮತಾಮಯಿ.

ಪತಿ ದೇಶದ ಪ್ರಧಾನಿಯಾದರೂ, ಮಕ್ಕಳು ಮುಖ್ಯಮಂತ್ರಿ ಹಾಗೂ ಸಚಿವರಾಗಿ ಅಧಿಕಾರ ಅನುಭವಿಸಿದರೂ, ಚನ್ನಮ್ಮನವರು ಮಾತ್ರ ಎಂದಿಗೂ ಹಮ್ಮು-ಬಿಮ್ಮು ತೋರದೆ ಸರಳ ಸಜ್ಜನಿಕೆಯನ್ನು ಕಾಯ್ದುಕೊಂಡಿದ್ದರು. ನಿತ್ಯದ ಪೂಜೆ-ಪುನಸ್ಕಾರ, ಮನೆಗೆ ಬಂದವರನ್ನು ಪ್ರೀತಿಯಿಂದ ಸತ್ಕರಿಸುವ ಸಂಸ್ಕಾರದ ಬದುಕೇ ಅವರ ಉಸಿರಾಗಿತ್ತು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವೇಗೌಡರಿಗೆ ಹಾಗೂ ಅವರ ಇಡೀ ಕುಟುಂಬಕ್ಕೆ ಆ ದೇವರು ಕರುಣಿಸಲಿ.

 – ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು

Tags:
error: Content is protected !!