ಮೈಸೂರು-ಮಳವಳ್ಳಿ ರಸ್ತೆಯಲ್ಲಿರುವ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ತನ್ನ 16ನೇ ವಾರ್ಷಿಕೊತ್ಸವವನ್ನು ಸೇವಾ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡಿರುವುದು ಶ್ಲಾಘನೀಯ. ‘ಗರ್ಭಿಣಿಯರಿಗೆ ಅಮ್ಮನಂತಹ ವೈದ್ಯೆ’ ಎಂದು ಚಿರಪರಿಚಿತರಾಗಿರುವ ಡಾ.ಸರಳ ಚಂದ್ರಶೇಖರ್ ಅವರ ಅವಿರತ ಸೇವೆಯ ಪರಿಣಾಮ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಂದು ಜನರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ.
ಈ ಸಂಸ್ಥೆಯು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಜತೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಹತ್ತಿರವಾಗಿದೆ. ಸಂಸ್ಥೆ ತನ್ನ 16ನೇ ವಾರ್ಷಿಕೋತ್ಸವದ ಅಂಗವಾಗಿ ಇಬ್ಬರು ರೋಗಿಗಳಿಗೆ ಉಚಿತವಾಗಿ ಅಂಜಿಯೋಗ್ರಾಮ್ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಆರ್. ಚಂದ್ರಶೇಖರ್ ತಿಳಿಸಿದ್ದು, ಆಸ್ಪತ್ರೆಯ ಈ ಸಮಾಜ ಸೇವೆ ಮೆಚ್ಚುವಂತಹದ್ದು, ಮುಂದಿನ ದಿನಗಳಲ್ಲಿಯೂ ಆಸ್ಪತ್ರೆಯಿಂದ ಇಂತಹದ್ದೇ ಸೇವೆಗಳು ಮುಂದುವರಿಯಲಿ.
–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.





