ದೇಶಕ್ಕೇ ಮಾದರಿಯಾಗಿರುವ ಮೈಸೂರನ್ನು ನಿರ್ಮಿಸಿದ ಮೈಸೂರು ಸಂಸ್ಥಾನದ ಮಹಾರಾಜರುಗಳು ಅನುಸರಿಸಿದ ಯೋಜನೆಗಳ ಮಾದರಿಯಲ್ಲೇ, ಗ್ರೇಟರ್ ಮೈಸೂರನ್ನು ನಿರ್ಮಾಣ ಮಾಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿರುವುದು ಸ್ವಾಗತಾರ್ಹ.
ಮುಂದಿನ ನೂರು ವರ್ಷಗಳ ದೂರ ದೃಷ್ಟಿಯಿಂದ ಪರಿಸರ ಮತ್ತು ಪರಂಪರೆಗೆ ಹಾನಿಯಾಗದ ರೀತಿ ಹಾಗೂ ಸಮರ್ಪಕ ಮೂಲಸೌಕರ್ಯಗಳು ದೊರಕುವಂತೆ ಮಾಡಲು ಜನಪ್ರತಿನಿಧಿಗಳು,ವಿಷಯ ತಜ್ಞರು, ವಾಸ್ತು ಶಿಲ್ಪಿಗಳು, ಜನ ಸಾಮಾನ್ಯರ ಜೊತೆ ಚರ್ಚಿಸಿ ಎಲ್ಲರ ಅಭಿಪ್ರಾಯಗಳನ್ನೂ ಕ್ರೋಢೀಕರಿಸಿ ಗ್ರೇಟರ್ ಮೈಸೂರು ವ್ಯವಸ್ಥಿತವಾಗಿ ರೂಪಿತವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಹರಿಸುವುದು ಒಳ್ಳೆಯದು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು



