ಮೈಸೂರಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯ ಬನಶಂಕರಿ ದೇವಸ್ಥಾನದ ಸಮೀಪ ಇರುವ ಸರ್ಕಲ್‌ನಲ್ಲಿ ವಾಹನ ದಟ್ಟಣೆ ಯಾವಾಗಲೂ ಹೆಚ್ಚಾಗಿರುತ್ತದೆ. ಶಿವನ ದೇವಾಲಯದ ಕಡೆಯಿಂದಬರುವ ವಾಹನಗಳು ಮತ್ತು ಕೆಎಸ್‌ಆರ್‌ಟಿಸಿ ಡಿಪೋ ಕಡೆಯಿಂದ ಬರುವ ಎಲ್ಲಾ ವಾಹನಗಳು ಈ ಸರ್ಕಲ್ ಮುಖಾಂತರವೇ ಹಾದು ಹೋಗುವುದರಿಂದ ಈ ಸರ್ಕಲ್ ಬಳಿ ಪದೇ-ಪದೇ ಅಪಘಾತಗಳು ಸಂಭವಿಸುತ್ತವೆ.
ಕಳೆದ ವಾರವಷ್ಟೇ ಇಲ್ಲಿ ಅಪಘಾತ ಸಂಭವಿಸಿ ವಾಹನ ಸವಾರರು ಮೃತಪಟ್ಟಿದ್ದಾರೆ. ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ಉಬ್ಬು ನಿರ್ಮಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕಿದೆ. ಈ ಬಗ್ಗೆ ನಗರಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಹಿತ ಕಾಪಾಡಬೇಕಾಗಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





