ರೈಲ್ವೆ ಪ್ರಯಾಣ ದರ ಕಡಿಮೆ ಇರುವುದರಿಂದ ಹಾಗೂ ಒಂದೇ ಬಾರಿಗೆ ಅಧಿಕ ಜನರು ಪ್ರಯಾಣಿಸಲು ಅವಕಾಶವಿರುವುದರಿಂದ ಹೆಚ್ಚಿನ ಜನರು ರೈಲ್ವೆ ಸಾರಿಗೆಯನ್ನು ಬಳಸುತ್ತಾರೆ. ರೈಲ್ವೆ ಇಲಾಖೆಯೂ ಸಾಕಷ್ಟು ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಇಂತಹ ತಂತ್ರಾಂಶಗಳಲ್ಲಿ “ವೇರ್ ಇಸ್ ಮೈ ಟೈನ್’ (Where is My Train) ಆ್ಯಪ್ ಕೂಡ ಒಂದು. ಅನೇಕ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ತಾವು ಪ್ರಯಾಣಿಸುವ ರೈಲು ಎಲ್ಲಿ ಹೋಗುತ್ತಿದೆ? ಮುಂದಿನ ನಿಲ್ದಾಣ ಯಾವುದು? ಎಂದು ತಿಳಿಯಲು ಈ ಆ್ಯಪ್ ಬಳಸುತ್ತಾರೆ. ಆದರೆ ಇತ್ತೀಚೆಗೆ ಈ ಆ್ಯಪ್‌ನಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದು, ಕೆಲ ಬಾರಿ ರೈಲಿನ ಲೊಕೇಷನ್ ಅನ್ನು ಸರಿಯಾಗಿ ತೋರಿಸುತ್ತಿಲ್ಲ. 12ರಂದು ಇದೇ ಸಮಸ್ಯೆಯಾಗಿತ್ತು. ಸಂಜೆ 7.50ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ರೈಲು ಮೂರನೇ ಪ್ಲಾಟ್ ಫಾರಂನಿಂದ ಹೊರಟಿತ್ತು. ಆದರೆ ವೇರ್ ಈಸ್ ಮೈ ಟೈನ್’ ಆ್ಯಪ್‌ನಲ್ಲಿ ರೈಲು ನಾಲ್ಕನೇ ಪ್ಲಾಟ್ ಫಾರಂನಲ್ಲಿ ಇರುವುದಾಗಿ ತೋರಿಸುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ಗೊಂದಲಕ್ಕೀಡಾದರು. ಆದ್ದರಿಂದ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು,





