Mysore
22
overcast clouds

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಓದುಗರ ಪತ್ರ: ಮದ್ಯವ್ಯಸನಿಗಳ ಹಾವಳಿಗೆ ಕಡಿವಾಣ ಹಾಕಿ

ದಸರಾ ಮಹೋತ್ಸವದ ಅಂಗವಾಗಿ ನಡೆಸುತ್ತಿರುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕೆಲವರು ಮದ್ಯ ಸೇವಿಸಿ ಬಂದು ಹೆಣ್ಣುಮಕ್ಕಳಿಗೆ ಮುಜುಗರವಾಗುವಂತೆ ವರ್ತಿಸುತ್ತಿದ್ದಾರೆ.

ಮಾನಸ ಗಂಗೋತ್ರಿ ಆವರಣದಲ್ಲಿ ಆಯೋಜನೆಯಾಗಿರುವ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಸಾಕಷ್ಟು ಯುವತಿಯರು ಬಂದು ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ಈ ಕಾರ್ಯಕ್ರಮಗಳಿಗೆ ಕೆಲ ಮದ್ಯವ್ಯಸನಿಗಳೂ ಆಗಮಿಸುತ್ತಿದ್ದು, ಹೆಣ್ಣು ಮಕ್ಕಳಿರುವ ಕಡೆ ಬಂದು ಅವರಿಗೆ ಮುಜುಗರವಾಗುವಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ಜನಜಂಗುಳಿಯ ನಡುವೆ ಬೇಕೆಂತಲೇ ಮುಟ್ಟುವುದು, ಕೈ ಹಿಡಿದು ಎಳೆದಿರುವ ಅನುಭವಗಳಾಗಿವೆ. ಈ ಬಾರಿಯ ಯುವ ಸಂಭ್ರಮಕ್ಕೆ ನನ್ನ ಸ್ನೇಹಿತರೊಂದಿಗೆ ಹೋಗಿದ್ದ ನನಗೂ ಇಂತಹದ್ದೇ ಅನುಭವವಾಗಿದೆ. ೩-೪ ಯುವಕರ ಗುಂಪೊಂದು ನಮ್ಮನ್ನು ಹಿಂಬಾಲಿಸಿದಲ್ಲದೆ ಕಾರ್ಯಕ್ರಮ ವೀಕ್ಷಿಸುವ ವೇಳೆ ಪಕ್ಕದಲ್ಲೇ ನಿಂತು ಕೈ ಹಿಡಿದು ಎಳೆದ ಘಟನೆ ನನಗೆ ಆತಂಕ ಉಂಟುಮಾಡಿತು. ಕೂಡಲೇ ನಾನು ಕಾರ್ಯಕ್ರಮದಿಂದ ಹೊರನಡೆದೆ. ಇಷ್ಟೊಂದು ಪೊಲೀಸ್ ಬಂದೋಬಸ್ತ್ ಇದ್ದರೂ ಮದ್ಯಪಾನ ಮಾಡಿ ಬಂದು ಯುವತಿಯರಿಗೆ ತೊಂದರೆ ನೀಡುತ್ತಿದ್ದಾರೆ ಎಂದರೆ ನಾವು ಇತರೆ ಕಾರ್ಯಕ್ರಮಗಳನ್ನು ವೀಕ್ಷಿಸುವುದಾದರೂ ಹೇಗೆ? ಆದ್ದರಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಯುವ ದಸರಾ, ಆಹಾರ ಮೇಳ, -ಲಪುಷ್ಪ ಪ್ರದರ್ಶನಗಳಲ್ಲಾದರೂ ಮದ್ಯವ್ಯಸನಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.

-ಅಂಬಿಕ, ಮೈಸೂರು

 

Tags: